ಬ್ಯಾಡಗಿ ಬಸ್ ಘಟಕದಲ್ಲಿ 50 ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.
ಬ್ಯಾಡಗಿ03 : ಒಬ್ಬ ವ್ಯಕ್ತಿ ಜೀವನದಲ್ಲಿ ಮಹಿಳೆಯರು ಪಾತ್ರ ತುಂಬಾ ದೊಡ್ಡದಿರುತ್ತದೆ ಆಕೆ ತಾಯಿಯಾಗಿ ಉದರಿಯಾಗಿ ಪತ್ನಿಯಾಗಿ ಬಾಳ್ಗೆ ಬೆಳಕಾಗುತ್ತಾಳೆ ವೈಯಕ್ತಿಕವಾಗಿ ಮನೆಯ ಜವಾಬ್ದಾರಿ ಅರ್ಧ ಜವಾಬ್ದವನ್ನು ಮಹಾತಾಯಿ ಮಹಿಳೆಯಾಗಿದ್ದಾಳೆ ಎಂದು ವಿಭಾಗೀಯ ನಿಯಂತ್ರಣಧಿಕಾರಿಗಳಾದ ಜಿ ವಿಜಯಕುಮಾರ್ ಅವರು ತಿಳಿಸಿದರು ಪಟ್ಟಣದ ಬಸ್ ವಿಭಾಗಿಯ ಘಟಕದಲ್ಲಿ 50ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹೆಣ್ಣು ಒಬ್ಬ ಶಿಕ್ಷಕಿಯಾಗಿ ಇಂಜಿನಿಯರಾಗಿ ಪೈಲೈಟಾಗಿ ಹಾಗೂ ಎಲ್ಲ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವವಳೆ, ಮಹಿಳೆಯಾಗಿದ್ದಾಳೆ ಸಮಾಜದ ಕಟ್ಟುಪಾಡುಗಳು ಹೊರತಾಗಿಯೂ ಕೂಡ ಈಗಿನ ಆಧುನಿಕ ಯುಗವನ್ನು ಮುಟ್ಟುತ್ತಿದ್ದಾಳೆ ಹಾಗಾಗಿ ವಿಶ್ವಾದ್ಯಂತ ಮಹಿಳೆಯರಿಗಾಗಿ ಈ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಅಶೋಕ. ರು. ಪಾಟೀಲ್ ವಿಭಾಗೀಯ ಸಾರಿಗೆ ಅಧಿಕಾರಿಗಳು ಮಾತನಾಡಿ ಮಹಿಳೆಯ ಸಮಾನತೆಯ ಜೊತೆಗೆ ಒಗ್ಗಟ್ಟಿನಲ್ಲಿ ಮಹಿಳೆಯರು ಸದಾ ಮುಂದಿರ್ತಾರೆ ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದ್ದಾರೆ ಪ್ರತಿ ವರ್ಷವೂ ಮಾರ್ಚ್ ತಿಂಗಳಲ್ಲಿ ಮಹಿಳೆಯರೇ ದಿನವನ್ನಾಗಿ ನಾವು ಆಚರಣೆ ಮಾಡುತ್ತೇವೆ ಮಹಿಳೆಯರು ಸಾಧನೆಯ ಮನಪೂರ್ವಕ ಗೌರವ ಸೂಚಿಸುವ ದಿನ ಇದಾಗಿದೆ ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ವಿನಯ್ಕುಮಾರ್. ಹೊಳೆಪ್ಪ ಗೋಳ.ವಿಶೇಷ ಆಹ್ವಾನಿತರಾಗಿ ಶ್ರೀಮತಿ ಶಿಲ್ಪಾ ಸಿದ್ದಮ್ಮನವರ್. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾವೇರಿ, ಮತ್ತು ಶ್ರೀಮತಿ ಶ್ರುತಿ ವಾಲಿಕಾರ್ ಆರೋಗ್ಯ ನೀರೀಕ್ಷಕಿ ಬ್ಯಾಡಗಿ ಪುರಸಭೆ ರವರು ಮಹಿಳಾ ದಿನಾಚರಣೆಯ ಅಂಗವಾಗಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತ ನಿರ್ವಾಹಕಿ ಯರಾದ ಶ್ರೀಮತಿ ಅನ್ನಪೂರ್ಣ ಹೂಗಾರ್ ರವರನ್ನು ಸನ್ಮಾನಿಸಲಾಯಿತು..ಬ್ಯಾಡಗಿಯ ಪೌರ ಮಹಿಳಾ ಕಾರ್ಮಿಕರನ್ನು , ಆಶಾ ಕಾರ್ಯಕರ್ತೆಯರನ್ನು, ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನ್ನು ಸನ್ಮಾನಿಸಲಾಯಿತು. ಘಟಕ ವ್ಯವಸ್ಥಾಪಕರಾದ ಶ್ರೀ ಜಿ. ಬಿ.ಅಡರಕಟ್ಟಿ ರವರು ಸ್ವಾಗತ ಕೋರಿದರು. ಘಟಕದ ಉಸ್ತುವಾರಿ ಅಧಿಕಾರಿಗಳಾದ ಶ್ರೀ ಆರ್ ಕೇಶವಮೂರ್ತಿ ಅವರು ವಂದನಾರೆ್ಣ ಮಾಡಿದರು. ಶ್ರೀ ಎಂ. ಎಸ್. ಹಿಂಚಿಗೇರಿ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಬ್ಯಾಡಗಿ ವಿಭಾಗೀಯ ಘಟಕದ ಎಲ್ಲಾ ಮಹಿಳಾ ನಿರ್ವಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.