ಹಮಾಲಿ ಕಾಮರ್ಿಕರಿಗೆ 5 ಸಾವಿರ ರೂ. ಆಥರ್ಿಕ ನೆರವಿಗೆ ಆಗ್ರಹ

ಲೋಕದರ್ಶನ ವರದಿ

ರಾಯಬಾಗ 12: ಕೋವಿಡ್-19 ಹಿನ್ನಲೆಯಲ್ಲಿ ಲಾಕ್ಡೌನ್ದಿಂದ ಸಂಕಷ್ಟಕ್ಕೆ ಒಳಗಾದ ಅಸಂಘಟಿತ ಕಾಮರ್ಿಕರಿಗೆ ಘೋಷಿಸಿಸಲಾದ ವಿಶೇಷ ಪ್ಯಾಕೇಜನಲ್ಲಿ ಶ್ರಮಜೀವಿ ಹಮಾಲಿ ಕಾಮರ್ಿಕರನ್ನು ಸೇರಿಸಿ ಆಥರ್ಿಕ ನೆರವು ನೀಡಬೇಕೆಂದು ಒತ್ತಾಯಿಸಿ ಮಂಗಳವಾರದಂದು ತಾಲೂಕಾ ಹಮಾಲಿ ಕಾಮರ್ಿಕರ ಸಂಘದ ಪದಾಧಿಕಾರಿಗಳು ಶಾಸಕ ಡಿ.ಎಮ್.ಐಹೊಳೆ ಹಾಗೂ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ಲಾಕ್ಡೌನನಿಂದಾಗಿ ನಿತ್ಯದ ದುಡಿಮೆಯಿಂದ ಬರುವ ಕೂಲಿಯಿಂದಲೇ ಬದುಕು ಕಟ್ಟಿಕೊಂಡಿರುವ ಶ್ರಮಜೀವಿಗಳಾದ ಹಮಾಲಿ ಕಾಮರ್ಿಕರು ಸಂಕಷ್ಟದಲ್ಲಿದ್ದು, ಲಾಕ್ಡೌನ್ನಿಂದ ಉದ್ಯೋಗವಿಲ್ಲದೇ ತುತ್ತು ಅಣ್ಣಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿಮರ್ಾಣಗೊಂಡಿದೆ. ಅನಕ್ಷರಸ್ಥರಾದ ತಮಗೆ ದಿನ ಕೂಲಿಯೇ ಜೀವನ ಆಧಾರವಾಗಿದೆ. ಲಾಕ್ಡೌನ್ನಿಂದಾಗಿ ಕೈಯಲ್ಲಿ ಕೆಲಸವಿಲ್ಲದೇ ಕಷ್ಟದಲ್ಲಿಯೇ ದಿನಗಳನ್ನು ಕಳೆಯಬೇಕಾಗಿದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರಕರ್ಾರ ಅಸಂಘಟಿತ ಕಾಮರ್ಿಕರಿಗೆ ಮತ್ತು ಸಂಕಷ್ಟದಲ್ಲಿರುವರಿಗೆ ವಿಶೇಷ ಪ್ಯಾಕೇಜ ಷೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹವಾಗಿದ್ದು, ಅದರಲ್ಲಿ ಅಸಂಘಟಿತ ಕಾಮರ್ಿಕರಲ್ಲಿಯೇ ಅತ್ಯಂತ ಶ್ರಮ ಜೀವಿಗಳಾದ ಹಮಾಲಿ ಕಾಮರ್ಿಕರಿಗೂ ಅನ್ವಯಿಸುವಂತೆ ಪ್ಯಾಕೇಜ್ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಸಂಕಷ್ಟದಲ್ಲಿರುವ ಹಮಾಲಿ ಕಾಮರ್ಿಕ ಕುಟುಂಬಗಳಿಗೂ ಕೂಡ 5000 ರೂ.ಆಥರ್ಿಕ ನೆರವನ್ನು ನೀಡಬೇಕೆಂದು ಮನವಿ ಆಗ್ರಹಿಸಿದ್ದಾರೆ. ತಾಲೂಕಾ ಹಮಾಲಿ ಕಾಮರ್ಿಕರ ಸಂಘದ ಅಧ್ಯಕ್ಷ ಕೆಂಚಪ್ಪಾ ಧರ್ಮಟ್ಟಿ, ಕಿರಣ ಹೊಸಕೊಟೆ, ಮುನ್ನಾ ಮುಲ್ಲಾ, ಸದಾಶಿವ ಕೊರವಿ, ಸಿದ್ರಾಮ ಕೊಳಿ, ರಾಯಪ್ಪರಂಗಣ್ಣವರ, ಮಹಾದೇವ ರಂಗಣ್ಣವರ, ವಿಠ್ಠಲ ರಂಗಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.