ಲೋಕದರ್ಶನ ವರದಿ
ಬೆಳಗಾವಿ 29: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚುಂಚವಾಡ ಗ್ರಾಮದ ಗಣಪತಿ ದೇವಸ್ಥಾನದ ಕಟ್ಟಡ ನಿಮರ್ಾಣಕ್ಕೆ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಹತ್ವಾಕಾಂಕ್ಷಿ ಯೋಜನೆ ವತಿಯಿಂದ 50 ಸಾವಿರ ರೂ.ಗಳ ಅನುದಾನದ ಡಿ.ಡಿ. ವಿತರಿಸಲಾಯಿತು.
ಮಂಜೂರಾದ ಅನುದಾನದ ಹಣದ ಡಿ.ಡಿ. ವಿತರಣಾ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶಂಕರ ಗೋಸೆನಟ್ಟಿ, ಉಪಾಧ್ಯಕ್ಷ ಶಿವಾನಂದ ಗೊದೊಳ್ಳಿ , ಸಮಿತಿಯ ಸರ್ವ ಸದಸ್ಯರು ಗ್ರಾಮದ ಗಣ್ಯರ ಸಮಕ್ಷಮದಲ್ಲಿ ಧರ್ಮಸ್ಥಳ ಯೋಜನೆಯ ಖಾನಾಪುರ ಘಟಕದ ಯೋಜನಾಧಿಕಾರಿ ರಿಯಾಜ ಅತ್ತಾರ ವಿತರಿಸಿದರು.
ಧರ್ಮಸ್ಥಳ ಸಂಘಗಳ ಒಕ್ಕೂಟ ಅಧ್ಯಕ್ಷರು,ಪದಾಧಿಕಾರಿಗಳು, ಸೇವಾ ಪ್ರತಿನಿಧಿ ರೇಣುಕಾ, ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು, ಯೋಜನೆಯ ಅನುದಾನಗಳು, ಗ್ರಾಮ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ರಿಯಾಜ ಅತ್ತಾರ ಮಾಹಿತಿ ನೀಡಿದರು. ಮಹಾಬಲೇಶ್ವರ ವಾರದ ದೇವಾಲಯದ ಅಭಿವೃದ್ಧಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಿತಿ ಅಧ್ಯಕ್ಷರ ಹಾಗೂ ಗ್ರಾ.ಪಂ.ಸದಸ್ಯ ಶಿವಶಂಕರ ಗೋಸೆನಟ್ಟಿ ಮಂಜೂರಾದ ಅನುದಾನದ ಬಳಕೆ ಮತ್ತು ಧರ್ಮಸ್ಥಳ ಯೋಜನೆಯ ಅಭಿವೃದ್ಧಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಲಿಂಗನಮಠ ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಾನಂದ ಗೊದೋಳ್ಳಿ ಕಾರ್ಯಕ್ರಮ ನಿರೂಪಿಸಿದರು.ಸೇವಾ ಪ್ರತಿನಿಧಿ ರೇಣುಕಾ ಸ್ವಾಗತಿಸಿದರು. ವಲಯದ ಮೇಲ್ವಿಚಾರಕ ಪ್ರವೀಣ ದೊಡಮನಿ ವಂದಿಸಿದರು.