5 ವರ್ಷದ ಪ್ರಾಮಾಣಿಕ ಆಡಳಿತವೇ ನಮ್ಮ ಗೆಲುವಿನ ಶ್ರೀರಕ್ಷೆ

ಲೋಕದರ್ಶನ ವರದಿ

ಅಥಣಿ  01: ಬಾರಿ ಜಿದ್ದಾಜಿದ್ದಿಯಾಗಿ ನಡೆದ ಇಲ್ಲಿನ ಅಥಣಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಯಿಸುವ ಸಹಕಾರಿ ಸಂಘದ  ಚುನಾವಣೆಯಲ್ಲಿ ಶೇ.97 ರಷ್ಟು ಮತದಾನವಾಗಿದ್ದು, ಹಿರೇಮಠ ಪೇನಲನ 15 ಜನ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ವಿರೋಧಿ ಪೇನಲ್ ಗುರುಸೇವಾ ಬಳಗ ಪೇನಲ್ಗೆ ಬಾರಿ ತೀವ್ರ ಮುಖಭಂಗವಾಗಿದೆ. 

ಮುಂಜಾನೆ 9 ಗಂಟೆಯಿಂದ ಆರಂಭವಾದ ಶಿಕ್ಷಕರ ಮತದಾನ ಮಧ್ಯಾಹ್ನ 3ರ ವೇಳೆ ಶೇ.95 ರಷ್ಠು ಮತದಾನವಾಗಿತ್ತು. ಶಿಕ್ಷಕರ ಸಹಕಾರಿ ಸಂಘದ ಕಚೇರಿಯಲ್ಲಿಯೇ ನಡೆದ ಮತದಾನಕ್ಕೆ ಬರುವ ಶಿಕ್ಷಕ ಶಿಕ್ಷಕಿಯರನ್ನು ಎರಡು ಬಣದ ಅಭ್ಯರ್ಥಿಗಳು ಕೈ ಮುಗಿದು ಸ್ವಾಗತಿಸಿದ್ದರು. ಜನಪ್ರತಿನಿಧಿಗಳನ್ನು ನಾಚಿಸುವ ರೀತಿಯಲ್ಲಿ ನಡೆದ ಈ ಶಿಕ್ಷಕರ ಚುನಾವಣೆಗೆ ಅಥಣಿಯಲ್ಲಿ  ಎಲ್ಲರ ಗಮನ ಸೆಳೆಯುವಂತೆ ನಡೆಯಿತು. ಸಂಜೆ 4 ಗಂಟೆಯ ನಂತರ ನಡೆದ ಮತ ಏಣಿಕೆ ಕಾರ್ಯ ಸಂಜೆ 8 ಗಂಟೆಯವರೆಗೆ ನಡೆಯಿತು. ಅಂತಿಮವಾಗಿ ಹಿರೇಮಠ ಪೇನಲ್ ಭರ್ಜರಿ ಗೆಲುವು ಸಾಧಿಸಿತು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರ ಹೆಸರುಗಳನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ದಿ ಅಧಿಕಾರಿ ವಿನಾಯಕ ಲಕ್ಷಾಣಿ ಘೋಷಿಸಿ ನಂತರ ಹಿರೇಮಠ ಪೇನಲನ ಅಭ್ಯರ್ಥಿಗಳು ಮತ್ತು ಶಿಕ್ಷಕರು ಹರ್ಷವ್ಯಕ್ತ ಪಡಿಸಿ ಸಿಹಿ ಹಂಚಿ, ಗುಲಾಲ ಎರಚಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಿಂದಿನ ಪೇನಲ್ಗೆ ಮತ್ತೋಮ್ಮೆ ಅವಕಾಶ ನೀಡಿದ ಶಿಕ್ಷಕರು  ಕಳೆದ 5 ವರ್ಷಗಳವರೆಗೆ ಪಾರದರ್ಶಕ ಆಡಳಿತ ನೀಡಿದ ಹಿರೇಮಠ ಪೇನಲ್ನ  ಸಾಮಾನ್ಯ ಕ್ಷೇತ್ರದಿಂದ ಮಹಾಂತೇಶ ಮಿರ್ಜೆ, ಗೋಪಾಲ ಗಿಡ್ಡಣ್ಣವರ, ಅಬ್ದುಲ ಅಜೀಜ ನಧಾಫ, ಭೀಮಪ್ಪ ಪೂಜಾರಿ, ಮಲ್ಲಿಕಾರ್ಜುನ ಬಿಜ್ಜರಗಿ, ಶ್ರೀಕಾಂತಯ್ಯಾ ಹಿರೇಮಠ, ವಿಶ್ವನಾಥ ಕಂಬಾಗಿ, ಶಿವಾನಂದ ವಾಲಿ, ಶಾಂತಪ್ಪ ಚೌಗಲೆ, ಮಹಿಳಾ ಕ್ಷೇತ್ರದಿಂದ ಚಿನ್ನವ್ವ ಜಂಗಮಶೆಟ್ಟಿ, ಮಹಾದೇವಿ ಮಾದರ, ಹಿಂದುಳಿದ ಅ ವರ್ಗದಿಂದ ಸಿಂಗಾಡಿ ಲಕ್ಷ್ಮಣ ಬಾಗಿ, ಸಿದ್ದಪ್ಪ ಅಲಬಾಳ, ಪ.ಜಾತಿ ಕ್ಷೇತ್ರದಿಂದ ಸುರೇಶ ಪರಶೇನವರ ಮತ್ತು ಪ.ಪಂ.ನಿಂದ ಗೋಪಾಲ ನಾಯಿಕ ವಿಜಯಶಾಲಿಯಾಗಿದ್ದಾರೆ. 

     ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಜಿ.ಎಂ ಹಿರೇಮಠ  ಹರ್ಷ ವ್ಯಕ್ತ ಪಡಿಸಿ ತಾಲೂಕಿನ ಎಲ್ಲ ಶಿಕ್ಷಕರು ನಮ್ಮ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತನ್ನು ನೋಡಿ ನಮಗೆ ಮತ್ತೇ ಆಡಳಿತ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಅವರಿಗೆಂದು ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ ಸಹಕಾರಿ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನಮ್ಮ ಧ್ಯೇಯವಾಗಿದೆ ಪ್ರಾಮಾಣಿಕತೆಯನ್ನುವುದು ಇನ್ನೂ ಜೀವಂತವಾಗಿದೆ ಪ್ರಾಮಾಣಿಕತಯನ್ನು ಗೌರವಿಸಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿದ ಎಲ್ಲ ಗುರುಬಳಗಕ್ಕೆ ಗುರು ಮಾತೆಯರಿಗೆ ತುಂಬು ಹೃದಯ ಕೃತಜ್ಞತೆಗಳನ್ನು ಸಲ್ಲಿಸಿದರು. 

ಕಳೆದ 5 ವರ್ಷಗಳ ಹಿಂದೆ ನಮ್ಮ ಪೇನಲ್ ಸದಸ್ಯರ ಆಡಳಿತದಲ್ಲಿ  ಸಹಕಾರಿ ಸಂಘದಲ್ಲಿನ ಆರ್ಥಿಕ ಸೋರಿಕೆಯನ್ನು ತಡೆಗಟ್ಟಿ,ಲಾಭದಾಯಕದತ್ತ ತಂದಿದ್ದೇವೆ.ಅಲ್ಲದೇ ಗಣಕೀಕೃತ ಸೇವೆಯನ್ನು ಆರಂಭಸಲಾಗಿದ್ದು,ಅಲ್ಲದೇ ಶಿಕ್ಷಕರಿಗೆ ಕಡಿಮೆ ದರ ಬಡ್ಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಹಕಾರಿ ಸಂಘವನ್ನು ಇನ್ನಷ್ಟು ಆರ್ಥಿಕವಾಗಿ ಬಲಪಡಿಸಿ  ಶಿಕ್ಷಕರ ಸಬಲೀಕರಣಕ್ಕಾಗಿ ಶ್ರಮಿಸಲಾಗುವದು ಎಂದು ಹೇಳಿದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿರೇಮಠ ಪೆನಲ್ ಎಲ್ಲ ಸದಸ್ಯರುಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಜಿ, ಎಂ, ಹಿರೇಮಠ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು ನಮ್ಮ ಗೆಲುವಿನಲ್ಲಿ ಅವರ ಪಾತ್ರ ಅತಿ ಮಹತ್ವದಾಗಿದ್ದು  ನಮ್ಮ ಗೆಲುವಿಗೆ ಹಗಲಿರುಳು ಶ್ರಮಿಸಿದ ಅವರಿಗೆ ಕೃತಜ್ಞತೆ ಸಲ್ಲಿಸಿದರು 

  ಈ ವೇಳೆ ಸರಕಾರಿ ನೌಕರರ ಸಂಘಟದ ಅಧ್ಯಕ್ಷ ರಾಮಣ್ಣ ಧರಿಗೌಡರ, ಬಿ.ಡಿ, ಮೂಲಿಮನಿ, ಎ.ಬಿ ಕುಟಕೋಳಿ, ಜಿ.ಎಂ.ಹಿರೇಮಠ, ಅಬ್ದುಲ ಅಜೀಜ, ನದಾಫ್, ಎ, ಕೆ, ಕೋಳಿ, ಜಿ.ಬಿ.ಗಿಡ್ಡಣ್ಣವರ, ಬಿ.ಎಲ್.ಪೂಜಾರಿ, ಎಂ.ಪಿ.ಬಿಜ್ಜರಗಿ, ಎಂ.ಎಂ.ಮಿರ್ಜೆ, ವಿ.ಎಸ್.ಕಂಬಾಗಿ, ಎಸ್.ಎ ಚೌಗಲೆ,ಎಸ್.ಎ.ವಾಲಿ ಇನ್ನೀತರರು ಉಪಸ್ಥತರಿದ್ದರು