5 ಟ್ರಿಲಿಯನ್ ಆರ್ಥಿಕತೆ ಸಾಧಿಸಲು ಭಾರತದ ಪ್ರತಿವರ್ಷ ಶೇ. 14ರಷ್ಟು ಪ್ರಗತಿ ಸಾಧಿಸಬೇಕು; ತಜ್ಞರು

ನವದೆಹಲಿ, ಏ 24,ಪ್ರಮುಖ ಜಾಗತಿಕ ಆರ್ಥಿಕ ದೇಶವಾಗಿರುವ ಭಾರತ ಕೋವಿಡ್-19 ಸೋಂಕಿನ ಸಂಕಷ್ಟದಿಂದ ಸಿಲುಕಿದ್ದ ಕೇಂದ್ರ ಸರ್ಕಾರದ ಆಶಯದಂತೆ 2024-25ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗಳಿಸಲು ದೇಶದ ಆರ್ಥಿಕತೆ ಪ್ರತಿ ವರ್ಷ ಶೇ.14ರಷ್ಟು ವೃದ್ಧಿಯಾಗಬೇಕಿದೆ. ದೇಶಾದ್ಯಂತ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆರ್ಥಿಕ ತಜ್ಞರು ಶುಕ್ರವಾರ ಈ ವಿಶ್ಲೇಷಣೆ ಬಹಿರಂಗಪಡಿಸಿದ್ದಾರೆ. 1992ರಿಂದ ದೇಶದ ಆರ್ಥಿಕತೆ ಪ್ರತಿವರ್ಷ ಶೇ.5.6ರಷ್ಟು ಪ್ರಗತಿಕಂಡಿದೆ. 1961ರ ನಂತರ ಇಲ್ಲಿಯವರೆಗೆ ಎಂದಿಗೂ ಅದು ಶೇ. 14ರ ಸಮೀಪಕ್ಕೆ ಬಂದಿಲ್ಲ. ಚೀನಾ 1992ರಿಂದ 2018ರವರೆಗೆ ವಾರ್ಷಿಕ ಸರಾಸರಿ ಶೇ.9.5 ಪ್ರಗತಿ ಕಂಡಿದೆ. 1961ರಿಂದ 2018ರವರೆಗೆ ಏಳಕ್ಕೂಹೆಚ್ಚು ಬಾರಿ ಶೇ. 14 ಅಥವಾ ಹೆಚ್ಚಿನ ಪ್ರಗತಿ ಕಂಡಿದೆ. ಆದರೆ, ಭಾರತ ಕೋವಿಡ್ -19 ಸೋಂಕಿನ ಸಂಕಷ್ಟದ ನಡುವೆಯೂ ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ತಲುಪುವ ಭರವಸೆಯಲ್ಲಿದೆ ಎಂದಿದ್ದರು. ಕೇಂದ್ರ ಸರ್ಕಾರ ಬಡವರ ನೆರವಿಗಾಗಿ ಮಾ. 31ರಂದು ಸಣ್ಣ ಉಳಿತಾಯಗಳ ಬಡ್ಡಿ ದರವನ್ನು ಕಡಿತಗೊಳಿಸಿದ ಬೆನ್ನಲ್ಲೇ ತಜ್ಞರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.