ರಮೇಶ ಜಾರಕಿಹೊಳಿಗೆ 5ಕ್ವಿಂಟಾಲ್ ಸೇಬಿನ ಹಾರ..!

ಗೋಕಾಕ: ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಮೇಶ ಜಾರಕಿಹೋಳಿ ಮೊದಲ ಬಾರಿಗೆ ಇಂದು ಸ್ವಕ್ಷೇತ್ರ ಗೋಕಾಕ್ ಗೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಪ್ರೀತಿಯ ಧೋತಕವಾಗಿ ಅಂದಾಜು 5ಕ್ವೀಂಟಾಲ್ ಸೇಬಿನ ಹಾರ ಹಾಕಿ ಸ್ವಾಗತಿಸಿಕೊಂಡರು.

ನಗರದ ಬಸವೇಶ್ವರ ವೃತ್ತದಲ್ಲಿ ನೂತನ ಸಚಿವರು ಆಗಮಿಸುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಘೋಷಣೆ ಕೂಗುತ್ತ ಕ್ರೇನ್ ಮೂಲಕ ತಾವು ತಯಾರಿಸಿದ್ದ 5ಕ್ವಿಂಟಾಲ್ ಸೇಬಿನ ಹಾರವನ್ನು ಹಾಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಚಿವರ ಜೊತೆ ಅಥಣಿಯ ನೂತನ ಶಾಸಕ ಮಹೇಶ ಕುಮಟಳ್ಳಿ ಉಪಸ್ಥಿತರಿದ್ದರು. ತಂದೆ-ತಾಯಿಯ ಸಮಾಧಿಗೆ ಪೂಜೆ: ನೂತನ ಸಚಿವ ರಮೇಶ ಜಾರಕಿಹೊಳಿ ಗೋಕಾಕ ನಗರಕ್ಕೆ ಆಗಮಿಸುತ್ತಿದ್ದಂತೆ ಮೊದಲು ಗ್ರಾಮದೇವತೆ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀವರ್ಾದ ಪಡೆದುಕೊಂಡರು.

ಅದಾದ ನಂತರ ದಿವಂಗತ ಲಕ್ಷ್ಮಣರಾವ ಜಾರಕಿಹೊಳಿ, ದಿವಂಗತ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವರ ಆಗಮದ ಹಿನ್ನಲೆಯಲ್ಲಿ ಸಮಾಧಿ ಸ್ಥಳವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. 

ಸಮಾಧಿ ಸುತ್ತ ಎರಡು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಹೆತ್ತವರಿಗೆ ನಮನ ಸಲ್ಲಿಸಿದರು. ಬಸವೇಶ್ವರ ಪುತ್ಥಳಿ, ಅಂಬೇಡ್ಕರ ಪುತ್ಥಳಿ, ಸಂಗೋಳ್ಳಿ ರಾಯಣ್ಣ ಪುತ್ಥಳಿಗೆ ಹೂಹಾರ ಸಮಪರ್ಿಸಿ ವಂದಿಸಿದರು. 

ಆರತಿ ಬೆಳಗಿ ಬರಮಾಡಿಕೊಂಡ ಪತ್ನಿ: ನೂತನ ಸಚಿವರಾಗಿ ಗೋಕಾಕ ನಗರಕ್ಕೆ ಆಗಮಿಸಿದ ರಮೇಶ ಜಾರಕಿಹೊಳಿ ಮನೆಗೆ ಆಗಮಿಸುತ್ತಿದ್ದಂತೆ ಪತ್ನಿ ಆರತಿ ಬೆಳಗಿ ಹೂವಿನ ಹಾರಹಾಕಿ ಮನೆಯೊಳಗೆ ಬರಮಾಡಿಕೊಂಡರು. 

ಹೆಲಿಕಾಪ್ಟರ್ನಲ್ಲಿ ಬಂದ ನೂತನ ಸಚಿವರು: ಚುನಾವಣೆ ಗೆಲುವಿನ ನಂತರ ಸಚಿವರಾಗಿ ಮೊದಲ ಬಾರಿಗೆ ಗೋಕಾಕಗೆ ಆಗಮಿಸಿದ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಮತ್ತು ಅವರನ್ನು ಹುರುದುಂಬಿಸಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಗೋಕಾಕ ನಗರಕ್ಕೆ ಆಗಮಿಸಿ ಗಮನ ಸೆಳೆದರು. 

ಬೆಂಗಳೂರಿನ ಎಚ್ಎಎಲ್ನಿಂದ ಗೋಕಾಕ ನಗರದ ಎನ್ಎಸ್ಎಫ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ಘೋಷಣೆಗಳನ್ನು ಕೂಗಿ, ಹೂಹಾರ ಹಾಗೂ ಹೂಗುಚ್ಛಗಳನ್ನು ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು.