ಕ್ಸಿಂಜಿಯಾಂಗ್ ನಲ್ಲಿ 5 ತೀವ್ರತೆಯ ಭೂಕಂಪ

ಬೀಜಿಂಗ್, ಮಾ 23, ಚೀನಾದ ಕ್ಸಿಂಜಿಯಾಂಗ್ ಯುಗ್ಯುರ್ ನ ವಾಯವ್ಯದಲ್ಲಿ ಸೋಮವಾರ ಬೆಳಗಿನ ಜಾವ ಭೂಕಂಪವಾಗಿದೆ ಎಂದು ಚೀನಾದ ಭೂಕಂಪ ಜಾಲ ಕೇಂದ್ರ ತಿಳಿಸಿದ  ಸೋಮವಾರ ಸ್ಥಳೀಯ ಕಾಲಮಾನ 3.21 ರ ಸುಮಾರಿಗೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟು ದಾಖಲಾಗಿತ್ತು ಎಂದು ಕೇಂದ್ರ ಹೇಳಿದೆ.41.75 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 81.11 ಡಿಗ್ರಿ ಪೂರ್ವ ರೇಖಾಂಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ವರದಿಯಾಗಿದೆ.