ಯರಗಟ್ಟಿ: ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರ

ಲೋಕದರ್ಶನ ವರದಿ

ಯರಗಟ್ಟಿ 06: ಇಲ್ಲಿನ ಯರಗಟಿ-ಬಾಗಲಕೋಟ ಹೆದ್ದಾರಿ ಪಕ್ಕದಲ್ಲಿ ಇತ್ತೀಚೆಗೆ ಗೃಹ ಮಂಡಳಿ ಹತ್ತಿರ ಪಕ್ಕದ ಜಮೀನಿನಲ್ಲಿ ಕುರಿ ಮೇಯಿಸುತ್ತಿರುವ ಕುರಿಗಾಯಿ ರಾಮದುರ್ಗ ತಾಲೂಕಿನ ಎಮ್.ಚಂದರಗಿ ಗ್ರಾಮದ ಚಂದ್ರಪ್ಪ ಶಿವಪ್ಪ ಕೌಜಲಗಿ ವಿದ್ಯುತ್ ಅಪಘಾತದಲ್ಲಿ ಮೃತಪಟ್ಟಿದ್ದನು. ಮೃತಪಟ್ಟ ಕುಟುಂಬಕ್ಕೆ ಹೆಸ್ಕಾಂ ಸಹಾಯಕ ಅಭಿಯಂತರ ಸಿ.ಎಸ್.ಮಠಪತಿ ಇಲಾಖೆ ನೀಡಿದ 5 ಲಕ್ಷ ರೂ. ಪರಿಹಾರ ಚಕ್ ವಿತರಿಸಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಜಿಲ್ಲೆಯಲ್ಲಿ ಸಾಕಷ್ಟು ವಿದ್ಯುತ್ ಅವಘಡಗಳು ಸಂಭವಿಸುತ್ತಿದ್ದು ಇದರ ಬಗ್ಗೆ ಜಾಗೃತ ವಹಿಸಬೇಕು ಎಂದು ಚಕ್ ವಿತರಣೆ ವೇಳೆ ಹಾಜರಿದ್ದ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಕರವೇ ಪಧಾಧಿಕಾರಿಗಳು ಹೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಈ ಸಂಧರ್ಭದಲ್ಲಿ ಕರವೇ ಸವದತ್ತಿ ತಾಲೂಕಾ ಯುವ ಘಟಕಾದ್ಯಕ್ಷ ರಫೀಕ್.ಡಿ.ಕೆ, ಕ.ರಾ.ರೈ.ಸಂಘದ ಜಿಲ್ಲಾ ಕಾರ್ಯದಶರ್ಿ ಗೂಳಪ್ಪ ಬಾವಿಕಟ್ಟಿ, ಸವದತ್ತಿ ತಾಲೂಕಾ ಅದ್ಯಕ್ಷ ಬಸವರಾಜ ಬಿಜ್ಜೂರ, ಯರಗಟ್ಟಿ ತಾಲೂಕಾದ್ಯಕ್ಷ ಪ್ರವೀಣ ಪಠಾತರ, ರಾಮದುರ್ಗ ತಾಲೂಕಾ ಅದ್ಯಕ್ಷ ಶಿವಾನಂದ ದೊಡವಾಡ, ಹುಸೇನ ಇಮ್ಮನ್ನವರ, ಭೀಮಶಿ ಭಟ್ಟಿ, ರಾಜು ಪಾಟೀಲ, ಶಿವಾನಂದ ಹಿರೇಮಠ ಮುಂತಾದವರಿದ್ದರು.