ಗೋಡೆ ಕುಸಿದು ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ 5 ಪರಿಹಾರ ಚಕ್
5 compensation packages for the family of a boy who died after a wall collapsed
ಮಹಾಲಿಂಗಪುರ, 30 : ಇತ್ತಿಚೇಗೆ ನಡೆದ ಜಿಟಿ ಜಿಟಿ ಮಳೆಗೆ ಗೋಡೆ ಕುಸಿದು ಬಾಲಕ ದರ್ಶನ್ ನಾಗಪ್ಪ ಲಾತೂರ(11) ಸ್ಥಳದಲ್ಲೆ ಸಾವನ್ನಪ್ಪಿದ್ದು ಅವರ ಕುಟುಂಬಸ್ಥರಿಗೆ ಸಚಿವ ಆರ್.ಬಿ ತಿಮ್ಮಾಪುರ ಸರ್ಕಾರದ 5 ಲಕ್ಷ ಪರಿಹಾರದ ಚಕ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಗನನ್ನ ಕಳೆದುಕೊಂಡ ತಾಯಿಯ ದು:ಖ ಎಂಥದ್ದು ಎನ್ನುವುದನ್ನು ನಾನಾ ಬಲ್ಲೆ, ಆದರೆ ಅವರ ಮಗನನ್ನು ಮರಳಿ ತರಲು ಆಗದೆ ಇದ್ದರು. ಆ ಕುಟುಂಬಕ್ಕೆ ಮತ್ತು ಕುಟುಂಬ ಸದಸ್ಯರಿಗೆ ನಮ್ಮ ಕೈಲಾದ ಸಹಾಯ ಮಾಡಿ ಅವರ ಮುಂದಿನ ಜೀವನ ಸಂತೋಷವಾಗಿರುವಂತೆ ನೋಡಿಕೊಳ್ಳುವುದು ನಮ್ಮೇಲ್ಲರ ಜವಾಬ್ದಾರಿಯಾಗಿದ್ದು. ಕಾರಣ ಈ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು 1 ಲಕ್ಷ 20 ಸಾವೀರ ರೂ ಸಾಲದೆ ಇರುವುದರಿಂದ ಪುರಸಭೆ ಅದ್ಯಕ್ಷರಿಗೆ ಇನ್ನೂ ಹೆಚ್ಚಿನ ಹಣ ಕೊಡುವಂತೆ ಹೇಳಿದರು.ಅಲ್ಲದೆ ಇವರ ಮನೆಯಲ್ಲಿರುವ ಇನ್ನೊಂದು ಮಗು ಆಸ್ಪತ್ರೆಯಲ್ಲಿ ಇದೆ ಅದರ ಜವಾಬ್ದಾರಿಯನ್ನು ಸಹ ನಾವೆ ವಹಿಸುತ್ತೇವೆ, ಮತ್ತು ಅಲ್ಲದೆ ನಮ್ಮ ತಾಲೂಕಿನಲ್ಲಿ 34 ಮನೆಗಳು ಬಿದ್ದಿವೆ ಮೇಳೆ ನಿಂತ ನಂತರ ಮನೆಗಳು, ಅಂಗನವಾಡಿ ಕೇಂದ್ರಗಳು, ಹಳೆಯ ಶಾಲೆಗಳು ಬಿಳುತ್ತಿವೆ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಯಾವ ಬಡವರಿಗೂ ತೊಂದರೆಯಾಗದಂತೆ ಮುಂಜಾಗೃತೆಯನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.ಅಲ್ಲದೆ ಅತಿ ಹಳೆಯ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಹುಡುಕಿ ಅವರಿಗೆ ಬೇರೆ ಕಡೆಗೆ ಇರುವ ವ್ಯೆವಸ್ಥೆ ಮಾಡಲು ತಿಳಿಸಲಾಗಿದೆ ಎಂದರು.
ನಂತರ ಮಾತನಾಡಿದ ಶಾಸಕ ಸಿದ್ದು ಸವದಿ ಸರ್ಕಾರ ಜನಪ್ರತಿನಿಧಿಗಳು ಎಷ್ಟೆ ಪ್ರಯತ್ನ ಮಾಡಿದರು ಸಹ ಇಂಥ ಬಡವರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿ ಉಳಿಯುತ್ತಲೆ ಇದ್ದಾರೆ. ಕಾರಣ ಜನ ಪ್ರತಿನಿಧಿಗಳು ಇಂಥ ಬಡಕುಟುಂಬಗಳಿಗೆ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಕೊಡಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಸದಸ್ಯ ಶೇಖರ ಅಂಗಡಿ, ಚನಬಸು ಯರಗಟ್ಟಿ, ಈರ್ಪ ದಿನ್ನಿಮನಿ, ಜಿಲ್ಲಾಧಿಕಾರಿ ಸಂಗಪ್ಪ, ಎಸ್ಪಿ ಸಿದ್ದಾರ್ಥ ಗೋಯಲ್,ಅಸಿಸ್ಟಂಟ ಕಮೀಷನರ ಸ್ವೇತಾ ಬೀಡಿಕರ, ತಹಶಿಲ್ದಾರ ಗೀರೀಶ ಸ್ವಾಧಿ, ಇಓ ಸಿದ್ದಪ್ಪ ಪಟ್ಟಿಹಾಳ, ಮತ್ತು ನಜೀರ ಅತ್ತಾರ, ಪ್ರಕಾಶ ಮಮದಾಪುರ, ಸಿದ್ದು ಬೆನ್ನೂರ, ದುಂಡಪ್ಪ ಜಾಧವರ, ಚನ್ನೂ ದೇಸಾಯಿ, ಶಿವು ಅಂಗಡಿ, ಮಾಹಾಲಿಂಗಪ್ಪ ಮಾಳಿ, ಮುಸ್ತಾಕ ಚಿಕ್ಕೋಡಿ, ಮಹಾಲಿಂಗಪ್ಪ ಲಾತೂರ, ವಿಷ್ಣು ಲಾತೂರ, ನಂದು ಲಾತೂರ, ರಮೇಶ ಲಾತೂರ, ಬಸು ಮಡಿವಾಳ, ಸೇರಿದಂತೆ ಹಲವರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 