ಸಣ್ಣ ಮತ್ತು ಮದ್ಯಮ ಉದ್ಯಮ ವಲಯಕ್ಕೆ 5.91 ಲಕ್ಷ ಕೋಟಿ ರೂ ಸಾಲ: ನಿರ್ಮಲಾ ಸೀರಾಮನ್

ನವದೆಹಲಿ, ಮೇ 12,ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ  ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು 5.95 ಲಕ್ಷ ಕೋಟಿ ರೂ ಸಾಲ ಮಂಜೂರು ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಾರ್ಚ್ 1 ರಿಂದ ಮೇ 8 ರ ವರೆಗೆ ಕಂಪೆನಿ ಕಾಯ್ದೆಯಡಿ ನೋಂದಣಿಯಾಗಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಸಹ 1.18 ಲಕ್ಷ  ಕೋಟಿ ರೂಪಾಯಿ ಸಾಲ ಒದಗಿಸಿವೆ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್, ಶೇ 97 ರಷ್ಟು ಅರ್ಹ ಸಾಲಗಾರರಿಗೆ 65 ಸಾವಿರದ 879 ಕೋಟಿ ರೂಪಾಯಿ ಮೊತ್ತದ  ತುರ್ತು ಸಾಲ ಮತ್ತು ದುಡಿಯುವ ಬಂಡವಾಳ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಕೇಂದ್ರ ಹಣಕಾಸು ಸಚಿವಾಲಯ 14 ರಾಜ್ಯಗಳಿಗೆ 15ನೇ ಹಣಕಾಸು ಆಯೋಗದಡಿ 6 ಸಾವಿರದ 195 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ.