ಮಾಸ್ಕೋ, ನ 7: ಫಿಲಿಪೈನ್ಸ್ ನ ಉತ್ತರ ಭಾಗದಲ್ಲಿ ಬುಧವಾರ ರಾತ್ರಿ 8.52ರ ಸುಮಾರಿಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪನದಲ್ಲಿ 5.7 ಕಂಪನಾಂಕದ ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ದತ್ತಾಂಶಗಳು ತಿಳಿಸಿವೆ. ಏಜೆನ್ಸಿ ಪ್ರಕಾರ, ಇಲ್ಲಿನ ಕ್ವೀಜನ್ ಪ್ರಾಂತ್ಯದ ಜೋಮಲಿಗ್ ದ್ವೀಪದಲ್ಲಿ ಭೂಕಂಪವಾಗಿದೆ. ಭೂಮಿಯಿಂದ 10 ಕಿಮೀ ಆಳದಲ್ಲಿ ಕಂಪನದ ಕೇಂದ್ರ ಸ್ಥಾನ ಗುರುತಿಸಲಾಗಿದೆ. ಭೂಕಂಪದಿಂದ ಸಾವು ನೋವುಗಳಾಗಿರುವ ಕುರಿತು ಇನ್ನೂ ಯಾವುದೇ ವರದಿ ಹೊರಬಿದ್ದಿಲ್ಲ.