ಟಿಬೆಟ್‌ನಲ್ಲಿ 5. 9 ತೀವ್ರತೆಯ ಭೂಕಂಪನ

ಬೀಜಿಂಗ್, ಮಾರ್ಚ್ 20, ನೈರುತ್ಯ  ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ಕ್ಸಿಗೇಜ್ ನಗರದಲ್ಲಿ   5.9 ತೀವ್ರತೆಯ ಭೂಕಂಪನ ಸಂಭವಿಸಿದೆ .ಕಂಪನ  ಶುಕ್ರವಾರ ಬೆಳಿಗ್ಗೆ  ಸಂಭವಿಸಿದೆ  ಎಂದೂ ಚೀನಾ ಭೂಕಂಪ ಜಾಲ ಕೇಂದ್ರ  ತಿಳಿಸಿದೆ. ಇದರ ಕೇಂದ್ರ ಬಿಂದು 28.63 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 87.42 ಡಿಗ್ರಿ ಪೂರ್ವ ರೇಖಾಂಶದಲ್ಲಿನ  10ಕಿಲೋಮಿಟರ್ ಆಳದಲ್ಲಿ ಇತ್ತು  ಎಂದೂ  ಕೇಂದ್ರ ತಿಳಿಸಿದೆ.