ಬೆಳಗಾವಿಯ ಆಕರ್ಿಟೆಕ್ಟ ಕುಲದೀಪ ಮೋರೆ 4 ನೇ ಚಿತ್ರಕಲಾ ಪ್ರದರ್ಶನ

ಲೋಕದರ್ಶನ ವರದಿ

ಬೆಳಗಾವಿ: 12: ನಗರದ ಶ್ರೀ ಮಾತಾ ಗ್ಲಾಸ್ ಆರ್ಟ ಗ್ಯಾಲರಿಯವರು ನಗರದ ಬಸವೇಶ್ವರ ವೃತ್ತದ ಬಳಿಯ ಮಹಾವೀರ ಭವನದ ಆರ್ಟ ಗ್ಯಾಲರಿಯಲ್ಲಿ ಚಿತ್ರಕಲೆ ಪ್ರದರ್ಶನವನ್ನು ಎರಡು ದಿನಗಳ ಕಾಲ ಏರ್ಪಡಿಸಿದ್ದಾರೆ.

ಬೆಳಗಾವಿಯ ಆಕರ್ಿಟೆಕ್ಟ ಕುಲದೀಪ ಮೊರೆ 4 ನೇ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಮಾತಾ ಗ್ಲಾಸ್ ಆರ್ಟ ಗ್ಯಾಲರಿಯವರು ಯುವ ಕಲಾವಿದರಿಗೆ ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ರವಿವಾರ ತಮ್ಮ ಕಲಾಕೃತಿಗಳನ್ನು ಉಚಿತವಾಗಿ ಪ್ರದರ್ಶನ ಮಾಡಲು ಉತ್ತಮ ಅವಕಾಶ ಕಲ್ಪಸಿಕೊಡುತ್ತಿದ್ದಾರೆ ಈ ವೇದಿಕೆಯನ್ನು ಯುವ ಕಲಾವಿದರು ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ಬೆಳಗಾವಿಯ ಪ್ರತಿ ಮನೆಗೆ ನಿಮ್ಮ ಕಲಾಕೃತಿಗಳು ತಲುಪುವಂತೆಯಾಗಲಿ ಎಂದು ಹಾರೈಸಿದರು.

ಲಲಿತಕಲಾ ಅಕಾಡಮಿ ಮಾಜಿ ಸದಸ್ಯರಾದ ಆರ್. ಎ. ದೇವಋಷಿ ಮಾತನಾಡಿ, ಗಡಿ ಭಾಗದಲ್ಲಿ ಅನೇಕ ಚಿತ್ರಕಲಾವಿದರು ಇದ್ದಾರೆ ಅವರಿಗೆ ಉತ್ತಮ  ವೇದಿಕೆ ದೊರೆಯುತ್ತಿರಲಿಲ್ಲ ಈ ಒಂದು ಸಮಸ್ಯೆಯನ್ನು ನಿಗಿಸುವ ನಿಟ್ಟಿನಲ್ಲಿ ಮಾತಾ ಗ್ಲಾಸ್ ಕಾರ್ಯ ಮಾಡುತ್ತಿದೆ. ಎಂದ ಅವರು ಕಲಾವಿದರು ಕಲಾವಿದರನ್ನು ಬೆಳೆಸುವುದು ಬಹಳ ವಿರಳ ಅದರಲ್ಲಿ ಮಾತಾಗ್ಲಾಸ್ ಮಾಲಿಕರಾದ ನಾಗೇಶ ಚಿಮರೋಲ ಮಾಡುತ್ತಿರುವುದು ಸಂತೋಷಕರ ವಿಷಯ ಎಂದು ಇನ್ನೂ ಹೆಚ್ಚು ಕಲಾವಿದರನ್ನು ಈ ಪ್ರದರ್ಶನದಲ್ಲಿ ಭಾಗವಹಿಸುವಂತೆ ಮಾಡಲು ಪ್ರಯತ್ನಸುತ್ತೇನೆ ಎಂದರು.

ಲಲಿತಕಲಾ ಅಕಾಡಮಿ ಮಾಜಿ ಸದಸ್ಯರಾದ ದೀಲಿಪ ಕಾಳೆ, ಕಲಾವಿದ ಪಿ.ಐ. ಹುಲಕುಂದ ಮಾತನಾಡಿದರು. ಈ ಪ್ರದರ್ಶನದಲ್ಲಿ ಬೆಳಗಾವಿಯ ಧಾರವಾಡದ ಯುವ ಹತ್ತು ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳಿಸಲಾಗಿದೆ.

ಈ ವೇಳೇ ಕಲಾವಿದರಾದ ನಾಗೇಶ ಚಿಮರೋಲ, ರವೀಂದ್ರ ಹೋಮಕರ, ಸಂತೋಷ ಮಲ್ಲೋಳ್ಳಿ, ಸಂಜೀವಕುಮಾರ ತಿಲಗರ, ವಿಜಯಕುಮಾರ ಗಾಯಕವಾಡ, ಮಾರುತಿ ಪಾಟೀಲ, ನೀತಿನ, ಸ್ನೇಹಾ ಪತ್ತಾರ, ಶ್ವೇತಾ ಪತ್ತಾರ, ದೀಪಾಲಿ ಪಾಟೀಲ, ಅಶೋಕ ಓಲಕರ, ಕಲ್ಲಪ್ಪ ಪಾಟೀಲ, ಮಾರುತಿ ಪಾತ್ರೋಟಿ, ಪ್ರವೀಣ ಮಠಪತಿ, ಚಂದ್ರು ಧನಗಳಕರ, ಶಂಕರ, ವಿನೋದ ದೇವಋಷಿ  ಸೇರಿದಂತೆ ಇನ್ನು ಅನೇಕರು ಇದ್ದರು, ಸಂಜೀವಕುಮಾರ ತಿಲಗರ ನಿರೂಪಿಸಿ ವಂದಿಸಿದರು.