ಬಳ್ಳಾರಿ,ಮೇ 29 : ಕೋವಿಡ್-19ಗಾಗಿ ಸರಕಾರಕ್ಕೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ವಿವಿಧ ಸಹಕಾರ ಸಂಘ, ಬ್ಯಾಂಕ್ಗಳಿಂದ ಚೆಕ್/ಡಿಡಿ ಮತ್ತು ಆರ್ಟಿಜಿಎಸ್ ಮುಖಾಂತರ ಸಂಗ್ರಹಿಸಿದ ರೂ.49.76ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮೂಲಕ ಸಹಕಾರ ಸಂಘಗಳ ಉಪ ನಿಬಂಧಕಿ ಡಾ.ಸುನೀತಾ ಸಿದ್ರಾಮ ಅವರು ಶುಕ್ರವಾರ ಹಸ್ತಾಂತರಿಸಿದರು.
ಕೊರೊನಾ ವೈರಸ್ನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸಕರ್ಾರಕ್ಕೆ ಆಥರ್ಿಕವಾಗಿ ನೆರವಾಗುವ ಹಿನ್ನಲೆಯಲ್ಲಿ ಜಿಲ್ಲೆಯ 57 ವಿವಿಧ ಸಂಘಗಳು ಚೆಕ್/ಡಿಡಿಗಳ ಮೂಲಕ 12.47 ಲಕ್ಷ ರೂ., 205 ಸಂಘ-ಸಂಸ್ಥೆಗಳು ಆರ್ಟಿಜಿಎಸ್ ಮೂಲಕ 26.07 ಲಕ್ಷ ರೂ. ಮತ್ತು 4 ಸಂಘಗಳು ಜಿಲ್ಲಾಧಿಕಾರಿಗಳ ಮೂಲಕ 11.22 ಲಕ್ಷ ರೂ.ಗಳು ಸೇರಿದಂತೆ ಒಟ್ಟಾರೆ 266 ಸಂಘ-ಸಂಸ್ಥೆಗಳಿಂದ 49.76 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡಲಾಗಿದೆ.