ಬಾಗಲಕೋಟೆ: ಎಪಿಎಂಸಿಯಲ್ಲಿ ಮಂಗಳವಾರ ಈರುಳ್ಳಿ ಬೆಲೆ ಉತ್ತಮ ಏರಿಕೆ ಕಂಡಿದೆ. ಉತ್ತಮ ಗ್ರೆೇಡ್ಒನ್ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿಕ್ವಿಂಟಲ್ಗೆ ಗರಿಷ್ಠ 8 ಸಾವಿರ ರೂ.ಗೆ ತಲುಪಿದೆ. 4 ವರ್ಷದ ನಂತರ ಬಾಗಲಕೋಟೆ ಎಪಿಎಂಸಿಯಲ್ಲಿ ಉಳ್ಳಾಗಡ್ಡಿಗೆ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಬೆಲೆ ದೊರಕಿದ್ದು, ಈರುಳ್ಳಿ ಬೆಳೆಗಾರರ ಮೊಗದಲ್ಲಿ ಹರ್ಷ ತುಂಬಿದೆ.
ಪ್ರವಾಹ ಹಾಗೂ ಸತತ ಮಳೆಯಿಂದಾಗಿ ಈರುಳ್ಳಿ ಬೆಳೆ ನೆಲಕಚ್ಚಿದ್ದರಿಂದ ಅದರ ಪ್ರಮಾಣವು ತೀರಾ ಕಡಿಮೆಯಾಗಿದೆ. ಬೇಡಿಕೆ ಸಾಕಷ್ಟು ಹೆಚ್ಚಾಗಿದೆ, ಇದರ ಪರಿಣಾಮವಾಗಿ ದಿನೇ ದಿನೇ ಈರುಳ್ಳಿ ಬೆಲೆ ಏರುಮುಖವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಅತ್ಯುತ್ತಮ ಉಳ್ಳಾಗಡ್ಡಿಗೆ ಮಂಗಳಅವಾರ ಗರಿಷ್ಠ 8 ಸಾವಿರ ರೂ.ವರೆಗೆ ಬೆಲೆ ಕೂಗಿದ್ದಾರೆ.
ಬಾಗಲಕೋಟೆ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ಖರೀದಿ ವರ್ತಕರ 12 ಅಂಗಡಿಗಳಿದ್ದು, ಕೆಲವೇ ಅಂಗಡಿಗಳಲ್ಲಿ ಉಳ್ಳಾಗಡ್ಡಿ ಖರೀದಿ ಹೆಚ್ಚಾಗಿ ಕಂಡುಬಂದಿದೆ. ಪ್ರತಿ ವರ್ಷ ದಿನಕ್ಕೆ 20 ರಿಂದ 25 ಸಾವಿರ ಕ್ವಿಂಟಲ್ಗೆ ಆವಕವಾಗುತ್ತಿದ್ದ ಈರುಳ್ಳಿ ಈ ಬಾರಿ ಪ್ರವಾಹದಿಂದಾಗಿ ಬೆಳೆ ಹಾನಿಯಾಗಿ ಬಹುತೇಕ ಈರುಳ್ಳಿ ರೈತರು ಪರಿತಪಿಸುವಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು 26 ಸಾವಿರ ಹೆಕ್ಟರ್ ಈರುಳ್ಳಿ ಬೆಳೆಯಾಗಿದ್ದು, 2.60 ಮೆಟ್ರಿಕ್ ಟನ್ ಉತ್ಪಾದನೆಯಾಗಿರುತ್ತದೆ. ಆದರೆ ಪ್ರವಾಹದಿಂದಾಗಿ 6ಸಾವಿರ ಹೆಕ್ಟರ್ ಹಾನಿಯಾಗಿದ್ದು, 60-70ಸಾವಿರ ಮೆಟ್ರಿಕ್ ಟನ್ ಬೆಳೆ ನೀರುಪಾಲಾಗಿದೆ. ಸದ್ಯ ಎಪಿಎಂಪಿಸಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು, ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಬೆಂಗಳೂರು, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳನಾಡಿನ ಖರೀದಿದಾರರು ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿಗಾಗಿ ಕಾಯುತ್ತಿದ್ದಾರೆ.
ಎಪಿಎಂಸಿ ಸಹಾಯಕ ಕಾರ್ಯದಶರ್ಿ ಪ್ರಕಾರ ರಾಜು ರಾಠೋಡ ಅವರ ಪ್ರಕಾರ ವಾರಕ್ಕೆ ಕೇವಲ 2 ಭಾರಿ ಮಾರಾಟ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಬೇಡಿಕೆ ಹೆಚ್ಚಾಗಿರುವುದರಿಂದ ವಾರಕ್ಕೆ 3 ಭಾರಿ ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಹರಾಜು ನಡೆಸಲಾಗುತ್ತಿದೆ. ನವೆಂಬರ ತಿಂಗಳಲ್ಲಿ ಒಟ್ಟು 45,842 ಕ್ವಿಂಟಲ್ ಈರುಳ್ಳಿ ಮಾರಾಟವಾಗಿದೆ ಎಂದು ತಿಳಿಸಿದರು.
ಒಟ್ಟು 300 ರೂ ರಿಂದ 8000 ವರೆಗೆ ಈರುಳ್ಳಿ ಮಾರಾಟವಾಗುತ್ತಿದೆ. ಪಕ್ಕದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ರೈತರು ಸಹ ಬಾಗಲಕೋಟೆಯ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ತರುತ್ತಾರೆ. ಜಿಲ್ಲೆಯ ಬಾದಾಮಿ ತಾಲೂಕಿನ ರೈತರು ಹುಬ್ಬಳಿ ಹಾಗೂ ಗದಗ ಎಪಿಎಂಸಿ ಮಾರುಕಟ್ಟೆಗೂ ಸಹ ಈರುಳ್ಳಿ ಒಯ್ಯುತ್ತಾರೆ. ಪುಣೆಯ ರಫ್ತು ಗುಣಮಟ್ಟಕ್ಕೆ ಸರಿಸಮಾನವಾದ ಗದಗ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈರುಳ್ಳಿಯನ್ನು ಸಂಗ್ರಹಿಸಲು ಶೈತ್ಯಾಗಾರದ ಅವಶ್ಯಕತೆ ಇದೆ ಎಂದು ಎಪಿಎಂಸಿ ಕಾರ್ಯದಶರ್ಿ ರಾಠೋಡ ಅಭಿಪ್ರಾಯ ಪಟ್ಟರು.
ಪ್ರತಿದಿನ 20 ರಿಂದ 25 ಸಾವಿರ ಈರುಳ್ಳಿ ಬರುತ್ತಿದ್ದು, ಈ ಭಾರಿ ಮಾತ್ರ 2ರಿಂದ 3ಸಾವಿರ ಕ್ವಿಂಟಲ್ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಪ್ರವಾಹ ಹಾಗೂ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ಹಾಳಾಗಿದೆ. ಈಗ ಮಾರುಕಟ್ಟೆಗೆ ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಸಾಕಷ್ಟು ಬೇಡಿಕೆ ಇದೆ ಎಂದು ಈರುಳ್ಳಿ ವರ್ತಕ ಎಸ್.ಎಂ.ಕಾಖಂಡಕಿ ತಿಳಿಸಿದರು.ಕಾಶಿಮಣ್ಣ ಭಕ್ತೆದಾರ, ಆರ್.ಎಚ್.ಚೌಧರಿ, ಆರ್.ಎಂ.ಬಾಗವಾನ, ಎಸ್.ಎಚ್.ದೊಡಮನಿ, ಸಂಗಣ್ಣ ಬಳ್ಳೂರ. ಸಿಕಂದರ ಗೂಳಸಂಗಿ ಸೇರಿದಂತೆ ಹಲವಾರು ವರ್ತಕರು ಈರುಳ್ಳಿ ಖರಿದಿಯಲ್ಲಿ ತೊಡಗಿಕೊಂಡಿದ್ದಾರೆ.