ಲೋಕದರ್ಶನ ವರದಿ
ಕಂಪ್ಲಿಯಲ್ಲಿ ಶ್ರೀ ಶನೈಶ್ಚರ ಮತ್ತು ವೆಂಕಟರಮಣ ಸ್ವಾಮಿಯ 43 ನೇ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭ.
ಕಂಪ್ಲಿ 18: ಪಟ್ಟಣದ ಸತ್ಯನಾರಾಯಣ ಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ್ಮೀ ವೆಂಕಟರಮಣ, ಶನೈಶ್ಚರ ದೇವರ 43ನೇ ಪ್ರತಿಷ್ಠಾಪನಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಲಕ್ಷ್ಮೀ ವೆಂಕಟರಮಣ, ಶನೈಶ್ಚರ ದೇವರಿಗೆ ಪಂಚಾಮೃತ ಅಭಿಷೇಕ, ಶತ ಅಷ್ಟೋತ್ತರ, ಸಂಖ್ಯಾ ಶಂಖಾಭಿಷೇಕ, ಪುರುಷಸೂಕ್ತ, ಶ್ರೀ ಸೂಕ್ತ ಮಹಾಭಿಷೇಕ, ಅಷ್ಟೋತ್ತರ ನಾಮಾರ್ಚನೆ, ಮಹಾಗಣಪತಿ ಆದಿತ್ಯಾಧಿ ನವಗ್ರಹ ಸಹಿತ ಪುರುಷ ಸೂಕ್ತ,ಶ್ರೀಸೂಕ್ತ ನಾರಾಯಣ ಅಷ್ಟೋತ್ತರ ಸಂಖ್ಯಾ, ಲಕ್ಷ್ಮೀ ಅಷ್ಟೋತ್ತರ ಸಂಖ್ಯಾ, ಶನೈಶ್ಚರ ವೇದ ಮಂತ್ರಪೂರ್ವಕ ಅಷ್ಟೋತ್ತರ ಸಂಖ್ಯಾ ಮಹಾಮೃತ್ಯುಂಜಯ, ಮಹಾಮಂಗಳಾರತಿ, ಅನ್ನ ಸಂತರೆ್ಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.
ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಲಕ್ಷ್ಮೀ ವೆಂಕಟರಮಣ ಹಾಗೂ ಶನೈಶ್ಚರ ದೇವರ ಪ್ರತಿಮೆಗಳಿಗೆ ವಿಶೇಷವಾಗಿ ಅಲಂಕಾರ ಮಾಡಿದ್ದರು. ಮನ್ನಾರಾಯಣ ಆಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಮಾತನಾಡಿ ಶನೈಶ್ಚರ ಮತ್ತು ಲಕ್ಷ್ಮೀ ವೆಂಕಟರಮಣ ಸ್ವಾಮಿಯನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಕಲ ಇಷ್ಟಾರ್ಥವೂ ಲಭಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತರಾಣಿ ಗೀರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶೀಧರ್, ಭಗವತಿ, ಅಶ್ವನಾರಾಯಣ, ಜಯಂತ್ ಶ್ರೀವತ್ಸ, ಅನಿರುದ್ಧ ಶಾಸ್ತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.