ಅರ್ಮೇನಿಯಾದಲ್ಲಿ 41 ಹೊಸ ಕೊರೊನಾವೈರಸ್ ಪ್ರಕರಣ : ಪ್ರಧಾನಿ

ಯೆರೆವಾನ್, ಮಾರ್ಚ್ 24, ಅರ್ಮೇನಿಯಾದಲ್ಲಿ ಸೋಮವಾರ ಕರೋನವೈರಸ್ ಕಾಯಿಲೆಯ (ಸಿಒವಿಐಡಿ -19) 40 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಪ್ರಧಾನಿ ನಿಕೋಲ್ ಪಶಿನಿಯನ್ ಹೇಳಿದ್ದಾರೆ.235 ಸೋಂಕಿತರ ಪೈಕಿ 26 ಜನರ ಪೈಕಿ ನ್ಯುಮೋನಿಯಾ  ಕಂಡುಬಂದಿದೆ. ಕೊಟಾಯಕ್ ಪ್ರಾಂತ್ಯ ಮತ್ತು ಯೆರೆವಾನ್‌ನ ಉತ್ಪಾದನಾ ಉದ್ಯಮಗಳಲ್ಲಿ ಹೊಸ ಪ್ರಕರಣಗಳು ಗೋಚರಿಸಿವೆ  ಎಂದು ಪಶಿನಿಯನ್ ಫೇಸ್‌ಬುಕ್‌ನಲ್ಲಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ .ಪ್ರಸ್ತುತ ಪರಿಸ್ಥಿತಿ ನಿಯಂತ್ರಿಸಲು ಹಲವು ಕಠಿಣ ಕ್ರಮಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.
"ಬೆಳಿಗ್ಗೆ, ಕೆಲವು ಅಗತ್ಯ ವಿತರಣಾ ಸೇವೆಗಳನ್ನು ಹೊರತುಪಡಿಸಿ, ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯನ್ನು ನಿಷೇಧಿಸಲಾಗುವುದು. ನಿರ್ಮಾಣ ಕೆಲಸ , ಜವಳಿ ಉದ್ಯಮಗಳ ಕಾರ್ಯಾಚರಣೆ ಮತ್ತು ಕೆಲವು ಸಣ್ಣ  ಕೈಗಾರಿಕೆಗಳ ಕೆಲಸವನ್ನು  ಸದ್ಯ ನಿಲ್ಲಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಆಹಾರ ಉತ್ಪಾದನೆ ಕೆಲಸ ಎಂದಿನಂತೆ ಮುಂದುವರಿಯಲಿದ್ದು, ಕಿರಾಣಿ ಅಂಗಡಿಗಳು ಸಹ ಎಂದಿನಂತೆ ಸಾಮಾನ್ಯವಾಗಿ  ಕಾರ್ಯನಿರ್ವಹಿಸಲಿದೆ ಎಂದೂ  ಅವರು ಹೇಳಿದರು.