40ನೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಬ್ಯಾಡಗಿ06: ದೇಶದ ಸಮಗ್ರ ಅಭಿವೃದ್ಧಿಗಾಗಿ ತ್ಯಾಗ, ಬಲಿದಾನಗಳ ಪ್ರತೀಕವಾಗಿ ಸೈದ್ಧಾಂತಿಕ ಹೋರಾಟದ ಪ್ರತಿಫಲವೇ ಬಿಜೆಪಿ ಹುಟ್ಟಿಗೆ ಕಾರಣವಾಯಿತು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

         ಸ್ಥಳೀಯ ಬಿಜೆಪಿ ಕಾಯರ್ಾಲಯದಲ್ಲಿ 40 ನೇ ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ನಂತರ ಪಂಡಿತ್ ದೀನದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ ಪ್ರಸಾದ್  ಮುಖಜರ್ಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಪಕ್ಷದ ಬೆಳವಣಿಗೆ ಹಾಗೂ ತತ್ವ ಸಿದ್ಧಾಂತಗಳ ಬಗ್ಗೆ ಶ್ಲಾಘಿಸಿದರಲ್ಲದೇ ಗಟ್ಟಿತನದ ನಿಲುವಿನಿಂದ ಸಂಘಟಿತವಾದ ಬಿಜೆಪಿ ಪಕ್ಷವು ಇಂದು ವಿಶ್ವದಾದ್ಯಂತ ಮನೆ ಮಾತಾಗಿದೆ. ಮೋದಿಯವರ ದಿಟ್ಟ ನಿಲುವು, ಅಮಿತ ಶಾ, ಅವರ ಚಾಣಾಕ್ಷತನದಿಂದ ಅಭಿವೃದ್ಧಿಯ ಪಥದಲ್ಲಿ ಬಿಜೆಪಿಯು ದಿಟ್ಟ ಹೆಜ್ಜೆ ಹಾಕುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದೆ ಎಂದು ತಿಳಿಸಿದರು. 

 ತಾಲೂಕ ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ ಮಾತನಾಡಿ, ಬಿಜೆಪಿಯ ಸಂಸ್ಥಾಪನಾ ದಿನವಾದ ಇಂದು ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿ ತ್ಯಾಗ ಮಾಡಿದ ಎಲ್ಲ ಹಿರಿಯ ನೇತಾರರನ್ನು ಸ್ಮರಿಸೋಣ ಎಂದು ಹೇಳಿದರಲ್ಲದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪಕ್ಷದ ಅಭಿವೃದ್ಧಿಗೆ ಮುಂದಾಗಲು ಕಾರ್ಯಕರ್ತರಿಗೆ ಕರೆ ನೀಡಿದರು. 

     ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಮುರಿಗೆಪ್ಪ ಶೆಟ್ಟರ, ರವೀಂದ್ರ ಪಟ್ಟಣಶೆಟ್ಟಿ, ವೀರೇಂದ್ರ ಶೆಟ್ಟರ, ಪುರಸಭಾ ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ವಿನಾಯಕ ಹಿರೇಮಠ, ಎಪಿಎಂಸಿ ಸದಸ್ಯ ವಿಜಯ ಮಾಳಗಿ, ಸಂಜೀವ ಮಡಿವಾಳರ, ಶಿವಯೋಗಿ ಶಿರೂರು, ಅರುಣ ಪಾಟೀಲ, ವಿಷ್ಣುಕಾಂತ ಬೆನ್ನೂರ, ಸಂತೋಷ ಮೂಲಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.