ವೆಲ್ಲಿಂಗ್ಟನ್, ಮಾ 24 (ಕ್ಸಿನುಹ) ನ್ಯೂಜಿಲೆಂಡ್ ನಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು, 40 ಹೊಸ ಪ್ರಕರಣಗಳು ಪತ್ತೆಯಾಗಿವೆ. ನ್ಯೂಜಿಲೆಂಡ್ ನಲ್ಲಿ ಪ್ರಸ್ತುತ 155 ಕೋವಿಡ್ –19 ಪ್ರಕರಣಗಳಿವೆ. ಇದರಲ್ಲಿ ನಾಲ್ಕು ಜನರು ಸಮುದಾಯದ ಸೋಂಕಿಗೆ ಗುರಿಯಾಗಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಬುಧವಾರ ರಾತ್ರಿಯಿಂದ ಇಡೀ ದೇಶವನ್ನು ಲಾಕ್ ಡೌನ್ ಮಾಡಲು ಅಲ್ಲಿನ ಸರ್ಕಾರಗಳು ನಿರ್ಧರಿಸಿವೆ. ಶಾಲೆಗಳಿಗೆ ಇಂದಿನಿಂದ ರಜೆ ಘೋಷಿಸಲಾಗಿದೆ.