ನವದೆಹಲಿ,
ಡಿ.18 ,40 ಸಾವಿರ ಯುವತಿಯರಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆತ್ಮರಕ್ಷಣೆ ತರಬೇತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅಕ್ಷಯ್, ಮುಂಬೈ ನಲ್ಲಿ ಅನೇಕ
ಶಾಲೆಗಳಿದ್ದು, ಮಕ್ಕಳಿಗೆ ಮಾರ್ಷಲ್ ಆರ್ಟ್ ತರಬೇತಿ ನೀಡುತ್ತೇನೆ. ನಾನು ಮತ್ತು ನನ್ನ ಶಾಲೆ ವತಿಯಿಂದ
ಇದುವರೆಗೂ 40 ಸಾವಿರ ಮಕ್ಕಳಿಗೆ ಉಚಿತ ಸ್ವಯಂ ರಕ್ಷಣಾ ತರಬೇತಿ ನೀಡಿದ್ದೇವೆ ಎಂದರು. ಕಂಪನಿಯ ಸಿಇಒಗಳಿಂದ
ಹಿಡಿದು ಗೃಹಿಣಿಯರು ಈ ತರಬೇತಿ ಪಡೆಯಲು ಆಗಮಿಸುತ್ತಾರೆ ಎಂದರು. ಶೇ. 70 ಅದೃಷ್ಟ ಹಾಗೂ ಶೇ. 30ರಷ್ಟು ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು ಎಂದು ಹೇಳಿದ
ಅವರು, ಯಶಸ್ವಿ ಹಾಗೂ ವಿಫಲ ಎರಡೂ ಚಿತ್ರಕ್ಕೂ ಅಷ್ಟೇ ಪರಿಶ್ರಮ ಪಟ್ಟಿದ್ದೆ ಎಂದು ತಿಳಿಸಿದ್ದಾರೆ.
ಶೀಘ್ರವೇ ಅಕ್ಷಯ್ ಕುಮಾರ್ ಅವರು ನಟಿ ಕರೀನಾ ಕಪೂರ್ ಅವರೊಂದಿಗೆ ಗುಡ್ ನ್ಯೂಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.