ಶ್ರೀನಗರ 07: ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್ ಬಳಿ ಗಡಿ ನುಸುಳುತ್ತಿದ್ದ ಉಗ್ರರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದು ಇನ್ನು ಗುಂಡಿನ ದಾಳಿಯಲ್ಲಿ ಮೇಜರ್ ಸೇರಿದಂತೆ ನಾಲ್ವರು ಭಾರತೀಯ ಯೋಧರು
ಹುತಾತ್ಮರಾಗಿದ್ದಾರೆ.
ಕಳೆದ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಬಂಡಿಪೋರ ಜಿಲ್ಲೆಯ ಗುರೇಜ್ ಸೆಕ್ಟರ್ ಬಳಿ 8 ಉಗ್ರರ ತಂಡ ಗಡಿ ನುಸುಳುತ್ತಿದ್ದ ವೇಳೆ 36ನೇ ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಇನ್ನು ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಮೇಜರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಸದ್ಯ ಉಗ್ರರ ವಿರುದ್ಧದ ಕಾಯರ್ಾಚರಣೆ ಮುಂದುವರೆದಿದ್ದು ಅಡಗಿ ಕುಳಿತಿರುವ ಉಗ್ರರ ದಮನಕ್ಕೆ ಭಾರತೀಯ ಸೇನೆ ಮುಂದಾಗಿದೆ. ಸದ್ಯ ಇಬ್ಬರ ಉಗ್ರರ ಮೃತದೇಹವನ್ನು ಸೇನೆ ವಶಪಡಿಸಿಕೊಂಡಿದೆ.