ನವದೆಹಲಿ, ಮೇ 13, ವಿಶ್ವದಲ್ಲಿ ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿದ್ದು, ಉದ್ಯೋಗಗಳಿಗೆ ಕತ್ತರಿ ಬೀಳುತ್ತಿದೆ. ದಕ್ಷಿಣ ಕೊರಿಯಾ ಕಂಪನಿಗಳು ನೌಕರರನ್ನು ವೇತನ ರಹಿತ ರಜೆ ಹಾಗೂ ಕೆಲಸದಿಂದ ತೆಗೆದು ಹಾಕುವ ಚಿಂತನೆ ನಡೆಸಿದ್ದರಿಂದ ಏಪ್ರಿಲ್‌ನಲ್ಲಿ 4,76,000 ಕಡಿಮೆಯಾಗಿದೆ ಎಂದು ಸಂಖ್ಯಾಶಾಸ್ತ್ರೀಯ ಕಚೇರಿ ಅಂಕಿ ಅಂಶ ಬುಧವಾರ ತಿಳಿಸಿದೆ.ಕೊರಿಯಾದ ಮಾಹಿತಿಯ ಪ್ರಕಾರ, ಏಪ್ರಿಲ್ ನಲ್ಲಿ ಉದ್ಯೋಗಿಗಳ ಸಂಖ್ಯೆ 26,562,000 ಆಗಿತ್ತು. ಈ ಅಂಶ ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ 4,76,000 ಕಡಿಮೆಯಾಗಿದೆ. ಇದು 21 ವರ್ಷದ ಹಿಂದಿನ ದಾಖಲೆ ಅಳಿಸಿ ಹಾಕಿದೆ.ಏಪ್ರಿಲ್‌ನಲ್ಲಿ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನೇಮಕಾತಿ ಪ್ರಮಾಣವು ಶೇಕಡಾ 59.4 ರಷ್ಟಿತ್ತು, ಇದು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ 1.4 ಶೇಕಡಾ ಕಡಿಮೆಯಾಗಿದೆ.