ಮೈಸೂರಿನಿಂದ 4,200 ಕೋಟಿ ಐಟಿ, ಐಟಿ ಇಎಸ್ ರಫ್ತು

ಮೈಸೂರು, ಡಿ 19 ಕಳೆದ ಹಣಕಾಸು ವರ್ಷದಲ್ಲಿ  ಮೈಸೂರಿನಿಂದ ಮಾಹಿತಿ  4,200 ಕೋಟಿ ರೂ  ಮೌಲ್ಯದ ತಂತ್ರಜ್ಞಾನ (ಐಟಿ) ಹಾಗೂ  ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ( ಐಟಿಇಎಸ್) ರಪ್ತು  ವಹಿವಾಟು ನಡೆದಿದೆ  ಮೈಸೂರಿನ ಭಾರತೀಯ  ಕೈಗಾರಿಕಾ ಒಕ್ಕೂಟ  (ಸಿಐಐ) ಆಯೋಜಿಸಿದ್ದ  'ಸೈಬರ್  ಭದ್ರತೆ   ಹಾಗೂ ಐಒಟಿ-ಡೆಸ್ಟಿನೇಶನ್ ಮೈಸೂರು' ಕುರಿತ ಸಮಾವೇಶದಲ್ಲಿ   ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ನಿರ್ದೇಶಕ ಶೈಲೇಂದ್ರ ಕುಮಾರ್ ತ್ಯಾಗಿ  ಈ ವಿಷಯ ತಿಳಿಸಿದ್ದಾರೆ. ಬೆಂಗಳೂರು  ನಂತರ  ಐಟಿ/ಐಟಿಇಎಸ್  ರಫ್ತಿನಲ್ಲಿ  ಮೈಸೂರು ಎರಡನೇ ಸ್ಥಾನದಲ್ಲಿದ್ದು, ಇನ್ಫೋಸಿಸ್ ಸೇರಿದಂತೆ ಗಮನಾರ್ಹ ಸಂಖ್ಯೆಯ ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ21ಸಾವಿರಐಟಿ ವೃತ್ತಿ ನಿರತರು  ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು 2018-19 ವರ್ಷದಲ್ಲಿ  ಎಸ್ ಟಿಪಿಐ  ಘಟಕಗಳು  4.16 ಲಕ್ಷ ಕೋಟಿರೂ ಮೌಲ್ಯದ  ಐಟಿ ಹಾಗೂ ಐಟಿಇಎಸ್ ಸೇವೆಗಳನ್ನು ರಪ್ತುಮಾಡಿವೆ. ಭಾರತದಿಂದ  59 ಬಿಲಿಯನ್ ಡಾಲರ್ ನಷ್ಟು  ರಪ್ತು ನಡೆದಿದ್ದು, ಈ ಪೈಕಿ ಕರ್ನಾಟಕದ ಪಾಲು ಶೇ. 41.3ರಷ್ಟು ಹೊಂದಿದ್ದು   ಅಂದರೆ 1.75 ಲಕ್ಷ ಕೋಟಿರೂ ರಪ್ತು ನಡೆಸಿದೆ  ಎಂದರು.