ಲೋಕದರ್ಶನ ವರದಿ
ಬಳ್ಳಾರಿ07: ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ 3ನೇ ಬಳ್ಳಾರಿ ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಅಧಿವೇಶನವು 2ದಿನ ಗಾಂಧಿ ಭವನದಲ್ಲಿ ಜರುಗಿತು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪರಿಸ್ಥಿತಿಗಳ ಬಗ್ಗೆ ಕೂಲಂಕುಷವಾಗಿ ಚಚರ್ಿಸಲಾಯಿತು. ವಿವಿಧ ತಾಲ್ಲೂಕುಗಳಿಂದ ಬಂದ ಪ್ರತಿನಿಧಿಗಳು ಚಚರ್ೆಗಳಲ್ಲಿ, ವಾದ-ವಿವಾದಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಲ್ಲದೆ.
ಅನೇಕ ಸಲಹೆಗಳನ್ನು ಸಹ ನೀಡಿದರು. ಕಳೆದ ಸಮ್ಮೇಳನದಿಂದ ಅಂದರೆ, 2009ರಿಂದ ಇಲ್ಲಿಯವರೆಗೂ ನಡೆದ ಹೋರಾಟಗಳ-ಕಾರ್ಯಕ್ರಮಗಳ ಕುರಿತಾದ ರಾಜಕೀಯ-ಸಂಘಟನಾತ್ಮಕ ವರದಿಯನ್ನು ಮಂಡಿಸಲಾಯಿತು. ಕೊನೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಕಾ.ಉಮಾರವರು ಮಾತನಾಡುತ್ತಾ" ಬಿಕ್ಕಟು ಹೆಚ್ಚಾದಂತೆ ಆಳುವ ಬಂಡವಾಳಶಾಹಿ ವರ್ಗವುಜನರ ಮೇಲಿನ ಶೋಷಣೆಯನ್ನು ತೀವ್ರಗೊಳಿಸಿದೆ. ಜನರ ಸಂಕಷ್ಟಗಳಿಗೆ ಕೊನೆಯಿಲ್ಲದಂತಾಗಿದೆ.
ಈ ಹಿನ್ನಲೆಯಲ್ಲಿ ದೇಶದಲ್ಲಿ ಎಡ ಹಾಗೂ ಪ್ರಜಾತಾಂತ್ರಿಕ ಚಳುವಳಿಗಳನ್ನು ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದನಾಯಕತ್ವದಲ್ಲಿ ಮತ್ತಷ್ಟು ಬೆಳೆಸಬೇಕಿದೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಈ ಸವಾಲನ್ನು ಸ್ವೀಕರಿಸಿ, ಘಳಿಗೆಯ ಅವಶ್ಯಕತೆತಕ್ಕಂತೆ ವೈಚಾರಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸನ್ನದ್ಧರಾಗಲು" ಕರೆ ನೀಡಿದರು. ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕಾ.ಸೋಮಶೇಖರ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದಶರ್ಿಯಾಗಿ ಕಾ.ರಾಧಕೃಷ್ಣಉಪಾಧ್ಯ, ಜಿಲ್ಲಾ ಸಮಿತಿ ಸದಸ್ಯರಾಗಿ ಮಂಜುಳಾ, ದೇವದಾಸ್, ಸೋಮಶೇಖರಗೌಡ, ನಾಗಲಕ್ಷ್ಮಿ, ಶಾಂತಾ, ಡಾ.ಪ್ರಮೋದ್, ಹನುಮಂತಪ್ಪ, ಗೋವಿಂದ್ ಚುನಾಯಿಸಲಾಯಿತು.