ಜಿಐಟಿ ಕಾಲೇಜಿನಲ್ಲಿ ತ್ರಿಡಿ ಲೇಸರ್ ತಂತ್ರಜ್ಞಾನ ಆರಂಭ : ದೇಶಪಾಂಡೆ

ಲೋಕದರ್ಶನ ವರದಿ

ಬೆಳಗಾವಿ : ನಗರದ ಪ್ರತಿಷ್ಠಿತ ಜಿಐಟಿ ಕಾಲೇಜಿನಲ್ಲಿ ತ್ರಿಡಿ ಲೇಸರ್ ತಂತ್ರಜ್ಞಾನ ಆರಂಭಿಸಲಾಗಿದೆ ಎಂದು ಗೋಗಟೆ ಇನ್ಸ್ಟಿಟೂಟ್ ಆಪ್ ಟೆಕ್ನಾಲಜಿ (ಜಿಐಟಿ) ಕಾಲೇಜಿನ ಪ್ರಾಚಾರ್ಯ ಡಾ. ಎ.ಎಸ್.ದೇಶಪಾಂಡೆ ಇಂದಿಲ್ಲಿ ಹೇಳಿದರು.

ನಗರದ ಗೋಗಟೆ ಇನ್ಸ್ಟಿಟೂಟ್ ಆಪ್ ಟೆಕ್ನಾಲಜಿಯಲ್ಲಿ ಬುಧವಾರ ಕರೆಯಲಾದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ತ್ರಿಡಿ ತಂತ್ರಜ್ಞಾನ ಅಳವಡಿಕೆಯ ಮಸೀನಗಳನ್ನು ತಯಾರಿಸಲು ಕನರ್ಾಟಕ ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಇವರು ಶೇಕಡಾ 50ರಷ್ಟು ಅನುದಾನವನ್ನು ನೀಡುವದಾಗಿ ಹೇಳಿದ್ದು ಹಾಗೂ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ವಿದ್ಯಾಥರ್ಿಗಳ ಕಡೆಯಿಂದ ತಯಾರಿಸಿದ ತ್ರಿಡಿ ಅಳವಡಿಕೆಯ ತ್ರಿಡಿ ಪ್ರಿಂಟಿಂಗ್ ಮಸೀನ್, ತ್ರಿಡಿ ಸ್ಕ್ಯಾನಿಂಗ್ ಮಸೀನಗಳು. ವೈದ್ಯಕೀಯ ಕ್ಷೇತ್ರ, ಸ್ಥಳಿಯ ಕೈಗಾರಿಕೆಗಳು, ಸೇರಿ ಹಲವು ಕ್ಷೇತ್ರಗಳಿಗೆ ಸಹಾಯಕಾರಿಯಾಗುತ್ತವೆ ಎಂದರು. 

ಭಾರತಿಯ ಉದ್ಯಮವು ಸ್ವಯಂ ಚಾಲಿತವಾಗಿ ಯಾಂತ್ರೀಕರಣ ಮತ್ತು ಡಿಜಿಟಲೀಕರಣಗಳನ್ನು ಅಳವಡಿಸಿಕೊಂಡಿರುವದು ಮಹತ್ವದ ಘಟ್ಟವಾಗಿದೆ ಹಾಗಾಗಿ ಭವಿಷ್ಯದಲ್ಲಿ ತಯಾರಾದ ತಂತ್ರಜ್ಞಾನಗಳು ಹೆಚ್ಚು ಪರಿಣಿತವಾಗಲು ಉತ್ತಮ ತರಬೇತಿಯ ಅವಶ್ಯಕತೆಯಿದೆ. ಈ ಅವಶ್ಯಕತೆಗಳನ್ನು ಪೂರೈಸಲು ಮತ್ತು ತಂತ್ರಜ್ಞಾನವನ್ನು ಉತ್ತಮ ಪಡಿಸಲು ಕನರ್ಾಟಕ ಕೌನ್ಸಿಲ್ನ ಸಹಾಯದಿಂದ (ಕೆಸಿಟಿಯು) ವಿದ್ಯಾಥರ್ಿಗಳು ತರಬೇತಿ ಎಂಜಿನೀಯರಗಳಾಗಲು ಸಂಯೋಜನಾ ಉತ್ಪಾದಕ ಮತ್ತು ರಿವರ್ಸ ಎಂಜಿನೀಯರಿಂಗ್ನ ಜೊತೆಗೂಡಿ ಕೆಎಲ್ಎಸ್ ಗೋಗಟೆ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿಯು (ಜಿಐಟಿ) ತನ್ನಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.

ಅದೇ ರೀತಿಯಾಗಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಜೆ.ಕೆ.ಕಿತ್ತೂರ ಇವರು ತ್ರಿಡಿ ಯಂತ್ರಗಳಿಂದ ವಸ್ತುಗಳನ್ನು ತಯಾರಿಸಬೇಕಾದರೆ ಯಾವ ರೀತಿಯಾದ ಮಟೇರಿಯಲ್ಗಳನ್ನು ಬಳಸಿಕೊಳ್ಳಬೇಕು ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ವಿದ್ಯಾಥರ್ಿಗಳು ಹೇಗೆ ತಯಾರಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದರು.

ತ್ರಿಡಿ ಮಸೀನಗಳಲ್ಲಿ ತಯಾರಿಸುವ ವಸ್ತುಗಳು ಎಬಿಎಸ್, ಪಿಎಲ್ಎ, ಮತ್ತು ಪ್ಲ್ಯಾಸ್ಟಿಕ್ಗಳನ್ನು ಕಚ್ಚಾ ವಸ್ತುಗಳಾಗಿ ಬಳಸುತ್ತೇವೆ ಎಂದು ಸಿಇಒ ಡಾ. ಅರುಣ ಕುಮಾರ ಹೇಳಿದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸಂಶೋದನಾ ವಿಭಾಗದ ಡಿನ್ ಡಾ. ವಿ.ಎಸ್.ಮಜಲಿ ಉಪಸ್ಥಿತರಿದ್ದರು.