ಧಾರವಾಡ 17: ಪ್ರತಿವರ್ಷದಂತೆ ಈ ವರ್ಷವೂ ಕೂಡ ಮರಾಠ ವಿದ್ಯಾ ಪ್ರಸಾರಕ ಮಂಡಳ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಫೆ.19ರಂದು ನಗರದ ಮರಾಠ ವಿದ್ಯಾಪ್ರಸಾರಕ ಮಂಡಳದ ಆವರಣದಲ್ಲಿ ಜರುಗಲಿದೆ ಎಂದು ಮರಾಠ ಮಂಡಳ ಅಧ್ಯಕ್ಷ ಮನೋಹರ ಮೋರೆ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಾಜಿ ಜಯಂತಿ ಪ್ರಯುಕ್ತ ಈಗಾಗಲೇ ಫೆ.15ರಂದು ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಫೆ.17ರಂದು ರಕ್ತದಾನ ಶಿಬಿರ, ರಂಗೋಲಿ ಸ್ಪರ್ಧೆ ನಡೆಸಿದ್ದು, ಫೆ.19ರಂದು ಆರೋಗ್ಯ ಶಿಬಿರ, ಮಕ್ಕಳ ವೇಷಭೂಷಣ ಸ್ಪರ್ಧೆ ಜರುಲಿವೆ ಎಂದು ಮಾಹಿತಿ ನೀಡಿದರು. ಫೆ.19ರ ಬೆಳಿಗ್ಗೆ 6ಕ್ಕೆ ಮಹಾಲಕ್ಷ್ಮಿ ಹೋಮ, ಬೆಳಿಗ್ಗೆ 8.30ಕ್ಕೆ ಮರಾಠ ವಿದ್ಯಾಪ್ರಸಾರಕ ಮಂಡಳದ ಆವರಣದಲ್ಲಿ ಅಧ್ಯಕ್ಷ ಎಂ.ಎನ್. ಮೋರೆ ಅವರಿಂದ ಭಗವಾ ಧ್ವಜಾರೋಹಣ, ಬೆಳಿಗ್ಗೆ 9ಕ್ಕೆ ಶಿವಾಜಿ ವೃತ್ತದಲ್ಲಿನ ಶಿವಾಜಿ ಪುತ್ಥಳಿಗೆ ಮಾಲಾರೆ್ಣ ಮತ್ತು ಭಗವಾ ಧ್ವಜಾರೋಹಣ ನೆರವೇರಲಿದೆ ಎಂದು ತಿಳಿಸಿದರು. ಬೆಳಿಗ್ಗೆ 9.30ಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮರಾಠ ಮಂಡಳ ಕಾರ್ಯಾಧ್ಯಕ್ಷರಾದ ಸುಭಾಷ ಶಿಂಧೆ ಅವರಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರೆ್ಣ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಬೆಳಿಗ್ಗೆ 10ಕ್ಕೆ ಮುತ್ತೈದೆಯರಿಂದ ಬಾಲ ಶಿವಾಜಿ ನಾಮಕರಣ, ತೋಟಿಲೋತ್ಸವ ಕಾರ್ಯ, ಬೆಳಿಗ್ಗೆ 10.30ಕ್ಕೆ ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಮತ್ತು ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ಶಂಕರ ಶೇಳಕೆ, ಡಾ.ಮಯೂರ ಮೋರೆ ಅವರಿಂದ ಶಿವಾಜಿ ಮಹಾರಾಜರ ಕೋಟೆಗಳ ಭಾವಚಿತ್ರ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು. ಬೆಳಿಗ್ಗೆ 10.30ಕ್ಕೆ ಜಿಲ್ಲಾಡಳಿತ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮರಾಠ ಮಂಡಳ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಅನ್ನ ಸಂತಪರ್ಣೆ ಕಾರ್ಯಕ್ಕೆ ಪಾಲಿಕೆ ಸದಸ್ಯರಾದ ಡಾ.ಮಯೂರ ಮೋರೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಮಧ್ಯಾಹ್ನ 3 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆಗೆ ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವಾರದ ಸಂತೋಷ ಲಾಡ್ ಅವರು ಚಾಲನೆ ನೀಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮರಾಠ ಮಂಡಳ ಕಾರ್ಯಾಧ್ಯಕ್ಷ ಸುಭಾಷ ಶಿಂಧೆ, ಗೌರವ ಕಾರ್ಯದರ್ಶಿ ರಾಜು ಬಿರಜೆನವರ, ಸಹ ಕಾರ್ಯದರ್ಶಿ
ಮಲ್ಲೇಶಪ್ಲ ಶಿಂಧೆ, ನಿರ್ದೇಶಕರಾದ ಸುಭಾಷ ಪವಾರ, ರಾಜು ಕಾಳೆ, ದತ್ತಾತ್ರೇಯ ಮೋಟೆ, ಈಶ್ವರ ಪಾಟೀಲ, ಶಿವಾಜಿ ಸೂರ್ಯವಂಶಿ, ಅನೀಲ ಭೋಸಲೆ, ಮಹೇಶ ಶಿಂಧೆ, ಪುರುಷೋತ್ತಮ ಜಾಧವ, ಸುನೀಲ ಮೊರೆ, ಪ್ರಸಾದ ಹಂಗಳಕಿ ಇದ್ದರು.