ನವದೆಹಲಿ, ಮೇ 5, ದೇಶದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 46433ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 3900 ಪ್ರಕರಣಗಳು ದೃಢಪಟ್ಟಿವೆ. ಇದು ಇಲ್ಲಿಯವರೆಗಿನ ಒಂದು ದಿನದ ಪ್ರಕರಣಗಳಾಗಿವೆ. 195 ಜನರು ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 1568ಕ್ಕೇರಿಕೆಯಾಗಿವೆ. ಈ ನಡುವೆ, 12726 ಜನರು ಚೇತರಿಕೆ ಕಂಡಿದ್ದಾರೆ. ದೇಶದಲ್ಲಿ ಸದ್ಯ 32,138 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಮಹಾರಾಷ್ಟ್ರ ಅತಿ ಹೆಚ್ಚು ಪೀಡಿತ ಪ್ರದೇಶವಾಗಿದ್ದು 14541 ಸೋಂಕಿತರು 283 ಸಾವುಗಳನ್ನು ವರದಿ ಮಾಡಿದೆ. ಗುಜರಾತ್ 5804 ಪ್ರಕರಣಗಳು 319 ಸಾವುಗಳಿಂದ ಎರಡನೇ ಸ್ಥಾನದಲ್ಲಿದೆ. ದೆಹಲಿ 4898 ಪ್ರಕರಣಗಳು, 64 ಸಾವುಗಳಿಂದ ಮೂರನೇ ಸ್ಥಾನದಲ್ಲಿವೆ.