370 ವಿಧಿ ರದ್ದು ಪರಿಣಾಮ; ಪಂಜಾಬ್ ನಲ್ಲಿ ಪೊಲೀಸರ ಕಟ್ಟೆಚ್ಚರ

ಚಂಡೀಗಡ, ಆಗಸ್ಟ್  7     ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುವ  370 ನೇ ವಿಧಿಯನ್ನು ಕೇಂದ್ರ ಸರ್ಕಾರ  ರದ್ದುಗೊಳಿಸಿರುವ ಕಾರಣ ರಾಜ್ಯದಲ್ಲಿ  ಭಯೋತ್ಪಾದಕರ ದಾಳಿಗಳು ನಡೆಯುವ ಸಾಧ್ಯತೆಗಳ  ಹಿನ್ನೆಲೆಯಲ್ಲಿ  ಪಂಜಾಬ್ ರಾಜ್ಯಾದ್ಯಂತ ಭದ್ರತೆ  ಬಿಗಿಗೊಳಿಸಿರುವ  ಪೊಲೀಸ್ ಅಧಿಕಾರಿಗಳು, ವಿವಿಧ  ಪ್ರದೇಶದಲ್ಲಿನ ಪರಿಸ್ಥಿತಿಗಳ ಮೇಲೆ ನಿರಂತರ ನಿಗಾ ವಹಿಸಿದ್ದಾರೆ.   

ಪಂಜಾಬ್ನಲ್ಲಿ ಜೈಶ್  ಮತ್ತು ಲಷ್ಕರ್  ಭಯೋತ್ಪಾದಕರು  ಆತ್ಮಾಹುತಿ ದಾಳಿ ನಡೆಸಬಹುದು  ಎಂಬ ಮಾಹಿತಿಗಳು  ರಾಜ್ಯ  ಸರ್ಕಾರಕ್ಕೆ ಬಂದಿರುವ  ಹಿನ್ನೆಲೆಯಲ್ಲಿ  ಭದ್ರತೆಯನ್ನು ಬಿಗಿಗೊಳಿಸಲಾಗಿದೆ. 

ಕಳೆದ ವಾರ, ಭಾರತ -ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕರ ಚಲನ ವಲನಗಳು ಹೆಚ್ಚುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಸಲ್ಲಿಸಿತ್ತು.  ಈ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಭದ್ರತಾ ಸೂಚನೆಗಳನ್ನು ನೀಡಿದೆ.  ಪಾಕಿಸ್ತಾನ  ಪ್ರಚೋದಿತ  ಉಗ್ರರ  ಸಂಚುಗಳನ್ನು ವಿಫಲಗೊಳಿಸಲು  ಪೊಲೀಸ್ ಮುಖ್ಯಸ್ಥರಿಗೆ ಮುಖ್ಯಮಂತ್ರಿ  ಕ್ಯಾಪ್ಟನ್ ಅಮರಿಂದರ್ ಸಿಂಗ್   ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

 ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ರಾಜ್ಯದಲ್ಲಿನ  ಕಾನೂನು  ಸುವ್ಯವಸ್ಥೆ ಪರಿಸ್ಥಿತಿ ಕುರಿತ ಪರಾಮಶರ್ೆಯ  ವೇಳೆ  ಮುಖ್ಯಮಂತ್ರಿ ಈ ಸೂಚನೆ ನೀಡಿದ್ದಾರೆ.