ಎಫ್ಆರ್ಪಿಗಿಂತ 300 ರೂ. ಹೆಚ್ಚು ದರ ನೀಡಲು ನಿಧರ್ಾರ

ಬೆಂಗಳೂರು 22, ಗೃಹ ಕಚೇರಿ ಕೃಷ್ಣಾದಲ್ಲಿ ಸಕ್ಕರೆ ಕಾಖರ್ಾನೆ ಮಾಲೀಕರ ಮಹತ್ವದ ಸಭೆ ಗುರುವಾರ ನಡೆದಿದ್ದು , ರೈತರಿಗೆ ಎಫ್ಆರ್ಪಿ ದರಕ್ಕಿಂತ 300 ರೂಪಾಯಿ ಹೆಚ್ಚು ನೀಡಲು ತೀಮರ್ಾನಿಸಲಾಗಿದೆ. ಟನ್ಗೆ ಹೆಚ್ಚುವರಿಯಾಗಿ 300 ರೂಪಾಯಿ ನೀಡಲು ತೀಮರ್ಾನಕ್ಕೆ ಬರಲಾಗಿದ್ದು, ಸಕ್ಕರೆ ಕಾಖರ್ಾನೆಗಳು 150 ರೂಪಾಯಿ ನೀಡಲು ತೀಮರ್ಾನಿಸಿದ್ದು, ಇನ್ನುಳಿದ 150 ರೂಪಾಯಿಯನ್ನು ಸಕರ್ಾರ ನೀಡಲು ತೀಮರ್ಾನಿಸಿದೆ.

ಕಬ್ಬು ಬೆಳೆಗಾರರ ಸಮಸ್ಯೆ ಇಂದಿನದಲ್ಲ. ಎಫ್ಆರ್ಪಿ ದರವನ್ನು ಕೇಂದ್ರ ಸಕರ್ಾರ ನಿಧರ್ಾರ ಮಾಡುತ್ತದೆ.ಅದರ ದರವನ್ನು ಕೊಡಿಸುವ ಜವಾಬ್ದಾರಿ ರಾಜ್ಯ ಸಕರ್ಾರದ್ದು, ಬಾಯಿ ಮಾತಿಗೆ ಕಬ್ಬು ಬೆಳೆಗಾರರು ಹಾಗೂ ಕಾಖರ್ಾನೆ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದಾರಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಯತ್ನ:

ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರ ಸಮಸ್ಯೆಗಳು ಗಮನಕ್ಕೆ ಬಂದ ಕೂಡಲೇ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತಿಳಿಸಿದರು. 

ರೈತರಿಗಾಗಿ ಬದುಕುತ್ತೇನೆ, ಸಾಯುವುದಾದರೂ ರೈತರಿಗಾಗಿಯೇ ಸಾಯುತ್ತೇನೆ. ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ. ಮುಖ್ಯಮಂತ್ರಿ ಹುದ್ದೆ ಶಾಶ್ವತ ಅಲ್ಲ. ಅದಕ್ಕೆ ಅಂಟಿಕೊಂಡು ಕೂರುವುದಿಲ್ಲ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್-ಜೆಡಿಎಸ್ ಶಾಸಕರ ಬೆಂಬಲ ದೇವರ ಆಶೀವರ್ಾದಿಂದ ಅಧಿಕಾರಕ್ಕೆ ಬಂದಿದ್ದೇವೆ.ಎರಡೂ ಪಕ್ಷದವರು ಜತೆಯಾಗಿಯೇ ಹೋಗುತ್ತೇವೆ ಎಂದರು. 2006ರಲ್ಲೂ ನಾವು ಕಡಿಮೆ ಸಂಖ್ಯೆಯಲ್ಲಿದ್ದೆವು.ಆಗ ನಮ್ಮೊಂದಿಗೆ ಸೇರಿ ನೀವು ಸಕರ್ಾರ ರಚಿಸಿರಲಿಲ್ಲವೆ. ಈಗ ಮಾತಿಗೆ ಮುಂಚೆ 38 ಸದಸ್ಯರನ್ನಿಟ್ಟುಕೊಂಡು ಸಕರ್ಾರ ರಚಿಸಿ ಸಿಎಂ ಆಗಿದ್ದೀರಾ ಎಂದು ಹೇಳುತ್ತೀರಲ್ಲ. ನಿಮಗೆ ಯಾವ ನೈತಿಕತೆ ಇದೆ ಎಂದು ಬಿಎಸ್ವೈಗೆ ಟಾಂಗ್ ನೀಡಿದರು.

ಬೆಳಗಾವಿ ಅಧಿವೇಶನಕ್ಕೆ ಬನ್ನಿ, ನಾವು ಮಾತನಾಡುತ್ತೆವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬನ್ನಿ ಮಾತಾಡಿ, ಮಾತನಾಡಲು ನಿಮಗೆ ನೈತಿಕತೆ ಇದೆಯೇ ?ಕೇಂದ್ರ ಸಕರ್ಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಆಯ್ತು.ತಾವು ಹೇಳಿದಂತೆ ಜನ್ಧನ್ ಖಾತೆಗೆ ಎಲ್ಲಿ ಹಣ ಹಾಕಿದ್ದಾರೆ ಎಂದು ಪ್ರಶ್ನಿಸಿದರು.

ಕಬ್ಬಿ ಬೆಳೆಗಾರರ ಸಮಸ್ಯೆ ಇಂದಿನದಲ್ಲ. ಹಿಂದಿನ ಸಕರ್ಾರದ ಅವಧಿಯಲ್ಲಿನ ಸಮಸ್ಯೆಗೆ ಈಗ ಹೋರಾಟ ಮಾಡುತ್ತಿದ್ದಾರೆ.ಮಹರಾಷ್ಟ್ರದಲ್ಲಿ ಈರುಳ್ಳಿ ಬೆಲೆ ಕುಸಿದಿದ್ದು, ಅಲ್ಲಿನ ಬೆಳೆಗಾರರು ಮುಂಬೈಗೆ ಹೊರಟಿದ್ದಾರೆ.ಆಗಾದರೆ ರಾತ್ರೋರಾತ್ರಿ ಸಮಸ್ಯೆಯನ್ನು ಬಗೆಹರಿಸ್ತಾರಾ?12 ವರ್ಷಗಳ ಹಿಂದೆಯೂ ಇದೇ ರೀತಿ ಆಗಿತ್ತು.ಆಗ ನಾನು ಅಧಿಕಾರದಲ್ಲಿದ್ದೆ.ತಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಿದ್ದೆ ಎಂದು ತಿಳಿಸಿದರು. 

ಬಾಗಲಕೋಟೆ ರೈತರೊಬ್ಬರು ಪ್ರಧಾನಿಗಳಿಗೆ ಈರುಳ್ಳಿ ಕುಸಿತದ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಾಳೆ ಬೆಳಗ್ಗೆಯೇ ಪರಿಹಾರ ಸಿಗುತ್ತಾ  ಎಂದ ಅವರು, ವಿಧಾನಸೌಧದ ಬಾಗಿಲು ಸದಾ ತೆರೆದಿರುತ್ತದೆ. ಏನೇ ಸಮಸ್ಯೆ ಇದ್ದರೂ ಬನ್ನಿ ಮಾತನಾಡೋಣ ಎಂದು ವ್ಯಾಪರಿಗಳಿಗೆ ಕುಮಾರಸ್ವಾಮಿ ಸಲಹೆ ನೀಡಿದರು.