ಸಾವಿತ್ರಿಬಾಯಿ ಫುಲೆ ಸಿನಿಮಾ ಉಚಿತವಾಗಿ ವೀಕ್ಷಿಸಿದ 300 ಸರ್ಕಾರಿ ಶಾಲಾ ಮಕ್ಕಳು

ಸಾವಿತ್ರಿಬಾಯಿ ಫುಲೆ ಸಿನಿಮಾ ಉಚಿತವಾಗಿ ವೀಕ್ಷಿಸಿದ 300 ಸರ್ಕಾರಿ ಶಾಲಾ ಮಕ್ಕಳು 300 government school children watched the movie 'Savitribai Phule' for free

ಲೋಕದರ್ಶನ ವರದಿ 

           ಮಹಾಲಿಂಗಪುರ 17: ಲಯನ್ಸ್‌ ಕ್ಲಬ್ ಮಹಾಲಿಂಗಪುರ ವತಿಯಿಂದ ನಗರದ ಮಾರುತಿ ಚಿತ್ರಮಂದಿರದಲ್ಲಿ ಸುಮಾರು 300 ಸರ್ಕಾರಿ ಶಾಲಾ ಮಕ್ಕಳಿಗೆ ಸಮಾಜ ಸುಧಾರಕಿ ಹಾಗೂ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲಾಯಿತು. 

          ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ವಿಶ್ವನಾಥ ಗುಂಡಾ ಅವರು, ಶಿಕ್ಷಣವೇ ಸಮಾಜದ ಪರಿವರ್ತನೆಗೆ ಅತ್ಯಂತ ಶಕ್ತಿಶಾಲಿ ಸಾಧನವಾಗಿದ್ದು, ಸಾವಿತ್ರಿಬಾಯಿ ಫುಲೆ ಅವರ ಜೀವನ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಿದೆ ಎಂದು ಹೇಳಿದರು. 

ರಾಜು ಎಸ್‌. ತಾಳಿಕೋಟಿ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವು, ಶಿಕ್ಷಣದ ಮಹತ್ವ ಹಾಗೂ ಮಹನೀಯರ ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 

ಡಾ. ಅಶೋಕ ದಿನ್ನಿಮನಿ, ಸೋಮಶೇಖರ ಸಂಶಿ, ಡಾ. ಎಂ.ಎಸ್‌. ಚನ್ನಾಳ, ಅರ್ಚನಾ ಕಡಪಟ್ಟಿ, ಅಶ್ವಿನಿ ಕೋಳಿಗುಡ್ಡ, ವಿದ್ಯಾ ಶಿರೋಳ, ಪರಿಣಿತಿ ಗುಂಡಾ, ರಾಮು ಕೆಳಗಡೆ, ಸುನೀಲ ಶಿಪ್ರಿ, ರಾಜು ಮುಗಳಖೋಡ, ಗಜಾನಂದ ಜಿಡ್ಡಿಮನಿ, ಮಲ್ಲು ಸಂಗನ್ನವರ್, ವಿನೋದ ಹುರಕಡ್ಲಿ, ಶ್ರೀಶೈಲ ಕೋಳಿಗುಡ್ಡ, ಡಾ. ಉಮಾ ಗುಂಡಾ, ಡಾ. ವಿದ್ಯಾ ದಿನ್ನಿಮನಿ, ಸಚಿನ್ ಗುಂಡಾ ಹಾಗೂ ಸಂಜೀವ ಶಿರೋಳ ಉಪಸ್ಥಿತರಿದ್ದರು. 

ವಿವಿಧ ಸರ್ಕಾರಿ ಶಾಲೆಗಳ ಸುಮಾರು 300 ವಿದ್ಯಾರ್ಥಿಗಳು ಪಾಲ್ಗೊಂಡು ಆಸಕ್ತಿಯಿಂದ ಸಿನಿಮಾ ವೀಕ್ಷಿಸಿದರು. ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಸಮಾನತೆಯ ಸಂದೇಶ ಸಾರುವ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.  ಮಹಾಲಿಂಗಪುರ ಲಯನ್ಸ್‌ ಕ್ಲಬ್ ಸದಸ್ಯರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳುವುದಾಗಿ ಹೇಳಿದರು.