ಮುಚ್ಚುವ ಆತಂಕದಲ್ಲಿ 30 ಸಾವಿರ ಪಬ್- ಬಾರ್ ಗಳು !

ಲಂಡನ್, ಮೇ  23,  ಕರೊನ ಕಾರಣಕ್ಕಾಗಿ ದೇಶದಲ್ಲಿ 30 ಸಾವಿರ ಅಧಿಕ ಪಬ್ ಗಳು  ಬಾರ್ ಗಳು  ಹಾಗೂ ರೆಸ್ಟೋರೆಂಟ್ ಗಳು   ಶಾಶ್ವತವಾಗಿ ಬಂದ್ ಆಗುವ  ಅಪಾಯದಲ್ಲಿ ಸಿಲುಕಿವೆ .  ಕೋರೋನ  ಬಿಕ್ಕಟ್ಟು ಆರಂಭವಾಗುವ ಮುನ್ನವೇ 12 ತಿಂಗಳುಗಳಲ್ಲಿ ದೇಶಾದ್ಯಂತ ಸುಮಾರು 2,800 ಬಾರ್ಗಳು ಮುಚ್ಚಿದ್ದವು. ಜುಲೈ ಆರಂಭದಲ್ಲಿ ಆತಿಥ್ಯ ಕ್ಷೇತ್ರ ಮರು ತೆರೆಯುವಾಗ  ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದೆಂದು ಸಮೀಕ್ಷೆಯೊಂದು ತಿಳಿಸಿದೆ.

ಅನೇಕ ಪಬ್ ಮಾಲಕರು ಎರಡು ಮೀಟರ್ಗಳ ಅಂತರದ  ನಿಯಮವನ್ನು ಸಡಿಲ ಮಾಡಬೇಕು ಎಂದು  ಒತ್ತಾಯಿಸುತ್ತಿದ್ದಾರೆ. ಈ ನಿಯಮ ಪ್ರಕಾರ ವ್ಯವಹಾರವನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿಲ್ಲವಾದ್ದರಿಂದ ತಾವು ಪಬ್ ಅನ್ನು ಮರು ಆರಂಭಿಸುವುದಿಲ್ಲವೆಂದು ಕೆಲವರು ಅಲವತ್ತು ಕೊಂಡಿದ್ದಾರೆ. ಎರಡು ಮೀಟರಗಳ   ನಿಯಮವೆಂದರೆ ಐದು ಪಬ್ ಗಳ ಪೈಕಿ ಒಂದನ್ನು ಮಾತ್ರ ಮರು ಆರಂಭಿಸಲು ಸಾಧ್ಯವಾಗಬಹುದು. ಒಂದು ಮೀಟರ್ ಅಂತರದ ನಿಯಮವಿದ್ದರೆ ಹೆಚ್ಚಿನ ಪಬ್ ಗಳನ್ನು   ತೆರೆಯಬಹುದಾಗಿದೆ ಸರಕಾರ  ನಿಯಮ ಸಡಿಲಿಕೆ ಮಾಡದೆ ಹೋದರೆ ಪಬ್ ಬಾರ್  ಮುಚ್ಚುವುದು  ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.