ಲೋಕದರ್ಶನ ವರದಿ
ಬೈಲಹೊಂಗಲ 13: ವೀರ ವನಿತೆ ಬೆಳವಡಿ ಮಲ್ಲಮನ ಉತ್ಸವ-2020 ಆಚರಣೆಗೆ ಸರಕಾರದಿಂದ 30 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಹಿಂದಿನ ವರ್ಷಕ್ಕಿಂತ ಅದ್ದೂರಿಯಾಗಿ ಉತ್ಸವ ಆಚರಿಲಾಗುವದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ದಿ.12ರಂದು ಮಲ್ಲಮ್ಮನ ಬೆಳವಡಿಯ ರಾಣಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಕರೆಯಲಾಗಿದ್ದ ಬೆಳವಡಿ ಮಲ್ಲಮನ ಉತ್ಸವ-2020ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗ್ರಾಮದ ಮುಖಂಡರು ತಿಳಿಸಿದ 13 ಬೇಡಿಕೆಗಳನ್ನು ಪರಿಗಣಿಸಲಾಗುವದು. ಚಲನಚಿತ್ರ ನಟರನ್ನು, ಪೊಲೀಸ ಅಧಿಕಾರಿ ರವಿ ಚನನ್ನವರ, ಚಿತ್ರ ನಿದರ್ೇಶಕ ನಾಗಾಭರಣ, ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಕರೆತರಲು ಪ್ರಯತ್ನಿಸಲಾಗುವದು. ತಮ್ಮ ಸಲಹೆಯಂತೆ ಈಶಪ್ರಭು ಪ್ರಶಸ್ತಿ ಎಂ.ಎಂ. ಕಾಡೇಶನವರ ಅವರಿಗೆ, ರಾಣಿ ಮಲ್ಲಮ್ಮ ಪ್ರಶಸ್ತಿ ಸಮಾಜ ಸುಧಾರಕಿ ವಿಜಯಲಕ್ಷ್ಮಿ ಬಾಳೆಕುಂದರಗಿ ಅವರಿಗೆ ನೀಡಲು ಪರಿಶೀಲಿಸಲಾಗುವದು.
ಬೆಳವಡಿ ಮಲ್ಲಮ್ಮ ಪ್ರಾಧಿಕಾರ ರಚನೆಗೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವದು. ನೂತನ ಬೆಳಗಾವಿ-ಬೆಂಗಳೂರ ರೆಲ್ವೆಗೆ ಮಲ್ಲಮ್ಮಳ ಹೆಸರಿಡಲು ಸರಕಾರವನ್ನು ಒತ್ತಾಯಿಸಲಾಗುವದು. ಜಿಲ್ಲಾ ಉಸ್ತುವಾರಿ ಸಚಿವರ, ಸಲಹೆಯ ಮೆರೆಗೆ ಗಣ್ಯರನ್ನು ಆಮಂತ್ರಿಸಲಾಗುವದು. ಸರಕಾರದಿಂದ ನಡೆಯುವ ಯಾವುದೇ ಉತ್ಸವ ಮತ್ತು ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯವಶ್ಯವಾಗಿದೆ. ನಾಡ ರಕ್ಷಣೆಗೆ ಹೋರಾಡಿದ ಶೂರರ ಶೌರ್ಯ ಪರಾಕ್ರಮಗಳನ್ನು ನೆನಪಿಸುವ ಉತ್ಸವಗಳು ಕೇವಲ ಅಧಿಕಾರಿಗಳ ಆಟಾಟೋಪದ ಆಚರಣೆಗಳಾಗಬಾರದು ಎಲ್ಲರ ಸಹಕಾರ ಅಗತ್ಯ. ಗ್ರಾಮಸ್ಥರು ನೀಡಿರುವ ಸಲಹೆ, ಸೂಚನೆ, ಅಹವಾಲುಗಳನ್ನು ಪರಿಗಣಿಸಿ ಹಣಕಾಸಿನ ಇತಿಮಿತಿಯಲ್ಲಿ ಉತ್ಸವ ಆಚರಿಸಲಾಗುವದು ಎಂದರು.
ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ರಾಜ್ಯದ ಪ್ರಸಿದ್ದ ಕಲಾವಿದರನ್ನು ಆಮಂತ್ರಿಸಲಾಗುವದು. ಒಪನ್ ಪೆಂಡಾಲ ನಿಮರ್ಿಸಿ ಹಣದ ಉಳಿತಾಯ ಮಾಡಿ ಅದೆ ಹಣವನ್ನು ಅದ್ದೂರಿ ಉತ್ಸವಕ್ಕೆ ವಿನಿಯೋಗಿಸಲಾಗುವದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಪ್ರವಾಸೋದ್ಯಮ ಸಚಿವ, ಜಿಲ್ಲೆಯ ಎಲ್ಲ ಸಚಿವರನ್ನು ಅಹ್ವಾನ ನೀಡಿ ಕರೆತರಲು ಪ್ರಯತ್ನಿಸಲಾಗುವುದು. ಉತ್ಸವದ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆಗಳನ್ನು ಹಂತ ಹಂತವಾಗಿ ಈಡೇರಿಸಿ ವರ್ಷದಿಂದ ವರ್ಷಕ್ಕೆ ಉತ್ಸವಕ್ಕೆ ಮೆರಗು ತಂದುಕೊಡಲಾಗುವದು.
ಸಾಹಿತಿ ಯ. ರು. ಪಾಟೀಲ ಮಾತನಾಡಿ, ವಿಚಾರ ಸಂಕೀರ್ಣಗಳಿಗೆ ಹೆಚ್ಚನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು. ಉತ್ಸವದ ಉದ್ಘಾಟಣೆ, ಸಮಾರೋಪ ಸಮಾರಂಭ ನಡೆಸಲು ಕ್ರಮ ಜರುಗಿಸಲು ಹೇಳಿದರು.
ಜಿಪಂ ಸದಸ್ಯ ವೀರಣ್ಣ ಕರೀಕಟ್ಟಿ ಮಾತನಾಡಿ, ಮಲ್ಲಮ್ಮಳ ಶೌರ್ಯ, ಸಾಹಸ ರಾಜ್ಯಾದ್ಯಂತ ಪಸರಿಸುವಂತೆ ಕ್ರಮ ಜರುಗಿಸಲು ಮನವಿ ಮಾಡಿದರು.
ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಆರ್.ಬಿ.ಪಾಟೀಲ, ಯುವ ಜಾಗೃತಿ ಅಧ್ಯಕ್ಷ ಪ್ರಕಾಶ ಹುಂಬಿ, ಮಹಾರುದ್ರ ನೆಲ್ಲಿಗಣಿ, ರಾಚಪ್ಪ ವಿ. ಕರಿಕಟ್ಟಿ, ಆರ್.ಎಸ್. ರೊಟ್ಟಯ್ಯನವರ, ಮಡ್ಡೆಪ್ಪ ಹುಂಬಿ, ಎಸ್.ಎಂ. ಕರೀಕಟ್ಟಿ, ಯಾಸೀನ ಕಿತ್ತೂರ ಸಲಹೆ ನೀಡಿ, ಮಲ್ಲಮ್ಮ ಉತ್ಸವ ಜಿಲ್ಲೆಗೆ ಸೀಮಿತವಾಗಬಾರದು ರಾಜ್ಯಾದ್ಯಂತ ಪಸರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸರಕಾರದ ವಾಹನದಲ್ಲಿ ಜ್ಯೋತಿ ತರಲಾಗಬೇಕು. ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. ಶಾಲಾ ಕಾಲೇಜು ವಿದ್ಯಾಥರ್ಿಗಳು ಭಾಗವಹಿಸಲು ಕ್ರಮ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಂತೆ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ತುತರ್ು ರಚನೆಯಾಗಬೇಕು, ಚಲಚಿತ್ರ ನಟರನ್ನು ಆಹ್ವನಿಸಬೇಕು. ಉತ್ಸವಕ್ಕೆ ಆಹ್ವಾನಿತ ಉಸ್ತುವಾರಿ ಮಂತ್ರಿಗಳು, ಎಲ್ಲ ಜನಪ್ರತಿನಿಧಿಗಳು ಗೈರಾಗದಂತೆ ನೋಡೊಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸರಕಾರದಿಂದ ಮಲ್ಲಮ್ಮ ಪ್ರಶಸ್ತಿ ಕೊಡಮಾಡಬೇಕು. ಉತ್ಸವಕ್ಕೆ ಸ್ವಂತ ಜಾಗೆಗೆ ಕ್ರಮ ಜರುಗಿಸಬೇಕು ಎಂದು ಅನೇಕ ಬೇಡಿಕೆಗಳನ್ನು ಇಟ್ಟರು.
ತಾಪಂ ಸದಸ್ಯೆ ಅಮೃತಾ ಕಕ್ಕಯ್ಯವನರ, ತಹಶೀಲದಾರ ಡಾ.ದೊಡ್ಡಪ್ಪ ಹೂಗಾರ, ತಾಪಂ ಇಓ ಸಮೀರ ಮುಲ್ಲಾ, ಕಿತ್ತೂರ ಸಿಪಿಐ ಎಸ್.ಎಫ್. ತೋಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದರ್ೇಶಕಿ ವಿದ್ಯಾ ಭಜಂತ್ರಿ, ಗ್ರಾಪಂ ಉಪಾಧ್ಯಕ್ಷೆ ಕಸ್ತೂರೆವ್ವ ರೇಶ್ಮಿ, ಪಿಡಿಓ ಎಚ್.ವಿಶ್ವನಾಥ, ಸದಸ್ಯರಾದ ರಫೀಕ ಹುಜರತಿ, ಗಂಗಪ್ಪ ತುರಾಯಿ, ಸಿದ್ದಪ್ಪ ಸಿದ್ದನ್ನವರ, ರಾಚಯ್ಯ ರೊಟ್ಟಯ್ಯನವರ, ಬಸಯ್ಯ ವಿರಕ್ತಮಠ, ಪ್ರಕಾಶ ಬಳಿಗಾರ, ಶಶಿಧರ ಪತ್ತಾರ, ಅಮೀರ ಹಾದಿಮನಿ ಸೇರಿದಂತೆ ಎಲ್ಲ ಇಲಾಖೆಗಳ ತಾಲೂಕು ಅಧಿಕಾರಿಗಳು ಬೆಳವಡಿ ಗ್ರಾಮದ ಹಿರಿಯರು ಗ್ರಾಪಂ ಸದಸ್ಯರು, ವಿದ್ಯಾಥರ್ಿ ಮುಖಂಡರು ಹಾಗೂ ಯುವಕ ಮಂಡಳಗಳವರು ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಕಾಶ ಹುಂಬಿ ನಿರೂಪಿಸಿ, ವಂದಿಸಿದರು.