ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 3 ರಾಕೆಟ್ ದಾಳಿ

ಟೆಲ್ ಅವೀವ್, ಫೆಬ್ರವರಿ 5, ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ ಮೂರು ರಾಕೆಟ್‌ಗಳನ್ನು ಹಾರಿಸುವ ಮೂಲಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಟ್ವಿಟರ್‌ನ ಪ್ರಕಟಣೆಯಲ್ಲಿ ತಿಳಿಸಿದೆ. "ಕೇವಲ 3 ರಾಕೆಟ್‌ಗಳನ್ನು ಗಾಜಾದಿಂದ  ಇಸ್ರೇಲ್‌ಗೆ ಹಾರಿಸಲಾಯಿತು. ಇದೂ ಸೇರಿದಂತೆ ಕಳೆದ ವಾರದಲ್ಲಿ ಗಾಜಾದಿಂದ ಇಸ್ರೇಲಿ ನಾಗರಿಕ ನೆಲೆಗಳ ಮೇಲೆ 13 ರಾಕೆಟ್ ದಾಳಿಗಳನ್ನು ನಡೆಸಲಾಗಿದೆ” ಎಂದು ಐಡಿಎಫ್ ಟ್ವೀಟ್ ತಿಳಿಸಿದೆ. ಕಳೆದ  ಬುಧವಾರ, ನೆಟಿವೊಟ್ ನಗರ ಮತ್ತು ಗಾಜಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸೈರನ್ ಸದ್ದು ಮಾಡಿದೆ ಎಂದು ಐಡಿಎಫ್ ಹೇಳಿದೆ.