ಕುಷ್ಟಗಿ ಇವರ ಆಶ್ರಯದಲ್ಲಿ 3ದಿನಗಳ ಸಾಣೇಹಳ್ಳಿಯ ಶಿವಸಂಚಾರ ನಾಟಕೋತ್ಸವದ ಸಮಾರಂಭ

ಕುಷ್ಟಗಿ ಇವರ ಆಶ್ರಯದಲ್ಲಿ 3ದಿನಗಳ ಸಾಣೇಹಳ್ಳಿಯ ಶಿವಸಂಚಾರ ನಾಟಕೋತ್ಸವದ ಸಮಾರಂಭ   3-day Sanehalli Shivasanchara Drama Festival under the auspices of Kushtagi

ಕುಷ್ಟಗಿ  12: ಸಮೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಕುಷ್ಟಗಿ ಇವರ ಆಶ್ರಯದಲ್ಲಿ 3ದಿನಗಳ ಸಾಣೇಹಳ್ಳಿಯ ಶಿವಸಂಚಾರ ನಾಟಕೋತ್ಸವ ಸಮಾರೋಪ ಸಮಾರಂಭವು ನಗರದ ಬಸ್ ನಿಲ್ದಾಣ ಪಕ್ಕದಲ್ಲಿ ಜರುಗಿತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಸಿ ಸೋಮಶೇಖರ್ ರವರು ಮಾತನಾಡಿ ಇವತ್ತಿನ ವಾಸ್ತವಿಕ ಬದುಕಿನಲ್ಲಿ ಶರಣರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೈತಿಕತೆಯಿಂದ ಸಹೋದರತ್ವದಿಂದ ಬದುಕುವುದು ಅತ್ಯವಶ್ಯವಾಗಿದೆ. ಶರಣರ ವಚನಗಳ ಸಂದೇಶದವು ಇವತ್ತಿನ ಸಮಾಜದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ.

ನಾಟಕಗಳ ಮುಖಾಂತರ ಶರಣರ ಬದುಕಿನ ಚಿತ್ರಣವನ್ನು ಸಾರ್ವಜನಿಕರಿಗೆ ಎಳೆ ಎಳೆಯಾಗಿ ಅಭಿನಯದ ಮುಖಾಂತರ ಕಲಾವಿದರು ಅಚ್ಚುಕಟ್ಟಾಗಿ ಅಭಿನಯಿಸುತ್ತಾರೆ ಸರ್ಕಾರ ಸಂಘ ಸಂಸ್ಥೆಗಳು ಸಾರ್ವಜನಿಕರು ಇಂತಹ ಬಸವಾದಿ ಶಿವ ಶರಣರ ವೈಚಾರಿಕತೆಯ ಸಂದೇಶಗಳನ್ನು ಸಾರುವಂತಹ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಕಾನೂನು ಹಿರಿಯ ಅಧಿಕಾರಿಗಳಾದ ಬಿ,ಎಸ್,ಪಾಟೀಲ್, ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ ಗಾಂಜಿ, ರಾಜ್ಯ ಜಾನಪದ ಅಕಾಡೆಮಿಯ ಸದಸ್ಯರಾದ ಜೀವನಸಾಬ ಬಿನ್ನಾಳ, ಕಸಾಪ ತಾಲೂಕ ಅಧ್ಯಕ್ಷರಾದ ಲೆಂಕಪ್ಪ ವಾಲಿಕಾರ,

ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಟಿ ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಮರೇಗೌಡ ನಾಗೂರು, ಸಾಹಿತಿಗಳಾದ ಹೆಚ್‌.ವೈ.ಈಟಿಯವರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ರಾಜ್ಯ ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಉಪ್ಪಲದಿನ್ನಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಮೃದ್ಧಿ ಸಂಸ್ಥೆ ಕಾರ್ಯದರ್ಶಿ ನಬಿಸಾಬ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತಪ್ಪ ಬಿಜಕಲ್ ಸ್ವಾಗತಿಸಿದರು. ಅಬ್ದುಲ್ ಕಲಾಂ ವಂದಿಸಿದರು. ಜಾನಪದ ಕಲಾವಿದರಾದ ಲಲಿತಮ್ಮ ಹಿರೇಮಠ ಪ್ರಾರ್ಥಿಸಿದರು. ಮೂರು ದಿನಗಳ ಸಾಣೇಹಳ್ಳಿ ಶಿವಸಂಚಾರದ ನಾಟಕಗಳಾದ ಕಳ್ಳರಸಂತೆ, ಜಂಗಮದೆಡೆಗೆ, ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ನಾಟಕಗಳ ಕಲಾವಿದರ ಉತ್ತಮ ಅಭಿನಯದಿಂದ ಜನರ ಮನಸೂರ್ಯಗೊಂಡು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ನಾಟಕಗಳ ಪ್ರದರ್ಶನಗಳನ್ನು ನೋಡಿದರು.