ಗದಗ 04: ರಾಜ್ಯದ ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರಿಂದು ಹಾತಲಗೇರಿ ಗ್ರಾಮದಲ್ಲಿ ಗದಗ ಹಾತಲಗೇರಿ ಲಕ್ಕುಂಡಿ ಗ್ರಾಮದ ಕೂಡು ರಸ್ತೆಯ ಅಭಿವೃದ್ಧಿ ಹಾಗೂ ಸುಧಾರಣೆಗೆ 3.70 ಕೋಟಿ ರೂಗಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಹಾತಲಗೇರಿ ಗ್ರಾ.ಪಂ. ಅಧ್ಯಕ್ಷ ಮೈಲಾರಪ್ಪ ಜಾಲಮ್ಮನವರ, ಗ್ರಾಮ ಪಂಚಾಯತಿ ಸದಸ್ಯರು, ಗಣ್ಯರು, ಹಿರಿಯರು ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.