ಭಾರತದಲ್ಲಿ ಮತ್ತೆ 3,320 ಕೊರೊನಾ ಸೋಂಕು ಪ್ರಕರಣ, 95 ಸಾವು

ನವದೆಹಲಿ, ಮೇ 9, ಭಾರತದಲ್ಲಿ ಮತ್ತೆ 3320 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 59,662 ಕ್ಕೆ ಏರಿಕೆಯಾಗಿದೆ. ಅಲ್ಲದೇ 95 ಜನರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 1,981 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 39,834 ಜನರು ಸೋಂಕಿನಿಂದ ಬಳಲುತ್ತಿದ್ದು 17,846 ಜನರು ಗುಣಮುಖರಾಗಿದ್ದಾರೆ.ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಮೇ 25 ರಿಂದ ಲಾಕ್ ಡೌನ್ ಘೋಷಿಸಲಾಗಿದ್ದು, ಇದೀಗ ಸ್ವಲ್ಪ ಸಡಿಲಿಕೆಯೊಂದಿಗೆ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ.