ಬೆಳಗಾವಿ: 01 :12ನೇ ಶತಮಾನದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳ ಹೋರಾಟದಲ್ಲಿ ಸೌಮ್ಯವಾದಿ ಶರಣರು ಒಂದು ಕಡೆಯಾದರೆ ಉಗ್ರವಾದಿ ಶರಣ ಹೋರಟಗಾರರು ಇನ್ನೊಂದು ಕಡೆ ಇದ್ದರು. ಮಹಷರ್ಿ ಮಡಿವಾಳ ಮಾಚಯ್ಯನವರು ಉಗ್ರರೂಪಿ ಹೋರಾಟಗಾರರಲ್ಲಿ ಪ್ರಮುಖರಾಗಿದ್ದರು ಎಂದು ಜಾನಪದ ವಿದ್ವಾಂಸರಾದ ಡಾ.ಸಿ.ಕೆ.ನಾವಲಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ(ಫೆ.1) ನಡೆದ ಶ್ರೀ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹಷರ್ಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಷರ್ಿ ಮಡಿವಾಳ ಮಾಚಯ್ಯನವರು ಬಸವಣ್ಣನವರ ಕಟ್ಟಾ ಅನುಯಾಯಿಗಳಾಗಿದ್ದು, ಅವರ ಗಟ್ಟಿ ನಿಲುವುಗಳು ಎಂತಹವರಲ್ಲಿಯೂ ನಡುಕ ಹುಟ್ಟಿಸುವಂತಿತ್ತು. ಒಂದು ಕೈಯಲ್ಲಿ ಖಡ್ಗ ಇನ್ನೊಂದರಲ್ಲಿ ಘಂಟೆ ಸದಾ ಅವರ ಆಯುಧಗಳಾಗಿದ್ದವು ಎಂದರು.
ಹಿಂದುಳಿದ ಸಮಾಜದಿಂದ ಬಂದ ಮಹಷರ್ಿಗಳಿಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಅವುಗಳಿಗೆಲ್ಲ ತಮ್ಮ ಉಗ್ರವಾದಿ ವಚನಗಳ ಮೂಲಕ ಉತ್ತರ ನೀಡುತ್ತಿದ್ದರು. ಅವರ ವಚನಗಳು, ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ವಚನಗಳು ಸಾಮಾನ್ಯ ಜನರಿಗೆ ತಲುಪಿಸಬೇಕಾಗಿದೆ ಎಂದು ಸಿ.ಕೆ.ನಾವಲಗಿ ಹೇಳಿದರು.
ತಿಪ್ಪಣ್ಣ ಶಹಾಪೂರ ಅವರು ಮಾತನಾಡಿ, ಸವಿತಾ ಮಹಷರ್ಿಗಳು ಕ್ಷೌರಿಕ ಸಮಾಜದ ಮಹಾನ್ ಋಷಿಮುನಿಗಳಾಗಿದ್ದು, ವಚನಗಳ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಿದವರಲ್ಲಿ ಸವಿತಾ ಮಹಷರ್ಿಗಳು ಪ್ರಮುಖರಾಗಿದ್ದಾರೆ
ವೇದಗಳಲ್ಲಿ ನಾಲ್ಕು ವೇದ ಅದರಲ್ಲಿ ಯಜುವರ್ೇದ ಬರೆದವರು ಕ್ಷೌರಿಕ ಸಮಾಜದ ಮೂಲ ಪುರುಷ ಸವಿತಾ ಮಹಷರ್ಿಗಳು. ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಇಲ್ಲಿಯವರೆಗೂ ಯಾವುದೇ ವಿಶೇಷ ಸೌಲಭ್ಯಗಳು ದೊರೆಯುತ್ತಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ ಎಂದರು.
ಪರಿಶಿಷ್ಟ ಜಾತಿ, ಪ.ಪಂಗಡದವರಿಗೆ ಇರುವ ಸೌಲಭ್ಯಗಳಲ್ಲಿ ಸವಿತಾ ಸಮಾಜದ ಜನರಿಗೆ ಒಂದು ಪ್ರತಿಶತ ಕೂಡ ಇಲ್ಲ. ಈ ಬಗ್ಗೆ ಸಕರ್ಾರ ಚಿಂತಿಸಿ ಹೆಚ್ಚಿನ ಅನುದಾನ ನೀಡಿ ಸವಿತಾ ಸಮಾಜದ ಬೆಳವಣಿಗೆಗೆ ಪೂರಕವಾದ ಯೋಜನೆ ರೂಪಿಸಬೇಕು ಎಂದರು.
ಚಿಕ್ಕೋಡಿಯ ಬಸವ ವಾಹಿನಿ ಅಕ್ಕನಬಳಗದ ಗಿರಿಜಾ ಪಾಟೀಲ ಮತ್ತು ತಂಡದವರು ವಚನ ಗೀತೆಗಳನ್ನು ಪ್ರಸ್ತುತ ಪಡೆಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಾಧ್ಯಕ್ಷರಾದ ವಿದ್ಯಾವತಿ ಭಜಂತ್ರಿ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಅಧಿಕಾರಿಗಳು, ಬೆಳಗಾವಿ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷರಾದ ಬಾಳಪ್ಪ ಮಡಿವಾಳರ ಹಾಗೂ ಬೆಳಗಾವಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ತಿಪ್ಪಣ್ಣ ರಾಯಚೂರ ಅವರು ಉಪಸ್ಥಿತರಿದ್ದರು.
ಶ್ರೀ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹಷರ್ಿ ಭಾವ ಚಿತ್ರದ ಭವ್ಯ ಮೆರವಣಿಗೆ:
ಇದಕ್ಕೂ ಮುಂಚೆ ಶ್ರೀ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹಷರ್ಿ ಭಾವ ಚಿತ್ರದ ಭವ್ಯ ಮೆರವಣಿಗೆ ನಡೆಯಿತು.ಶಾಸಕರಾದ ಅನಿಲ್ ಬೆನಕೆ ಅವರು ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಅಶೋಕ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಕೋಟೆ ಮಾರ್ಗವಾಗಿ ಆರ್.ಟಿ.ಓ ಕಚೇರಿ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾಮಂದಿರದವರೆಗೂ ನಡೆಯಿತು.