2 ಜಿ ಮೊಬೈಲ್ ಇಂಟರ್ನೆಟ್ ಸೇವೆ ಆರಂಭ , ತಪ್ಪದ ಗ್ರಾಹಕರ ಬವಣೆ

ಶ್ರೀನಗರ, ಜ 28 :      ಕಣಿವೆ ರಾಜ್ಯದಲ್ಲಿ  170 ದಿನಗಳ ನಂತರ 2 ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಪುನಃಸ್ಥಾಪಿಸಿದ್ದರೂ , ಜನರು, ವಿಶೇಷವಾಗಿ ಮಾಧ್ಯಮದವರು  ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಪ್ರಯೋಜನವಿಲ್ಲದೇ  ಅನೇಕ  ಸಮಸ್ಯೆ ಎದುರಿಸುತ್ತಿದ್ದಾರೆ.

ಕಡಿಮೆ ವೇಗದ ಪರಿಣಾಮ ತಮ್ಮ ಮೇಲ್‌ಗಳನ್ನು ವೇಗವಾಗಿ ಕಳುಹಿಸಲು  ಸಾಧ್ಯವಾಗುತ್ತಿಲ್ಲ  ಎಲ್ಲಾ ಸೆಲ್ಯುಲಾರ್ ಕಂಪನಿಗಳು ಕಳದೆ  25 ರಂದು ಪೂರ್ವ ಮತ್ತು ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್‌ನಲ್ಲಿ 2 ಜಿ ಇಂಟರ್ನೆಟ್ ಸೇವೆ  ಪುನರಾರಂಭಿಸುವುದಾಗಿ ಘೋಷಿಸಿವೆ.

'ಆದರೆ ಸೋಮವಾರ  ಕೆಲವು ಸೂಚನೆ  ನೀಡಿ  ನಿಮ್ಮ ಪ್ರದೇಶದಲ್ಲಿನ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಸಂದೇಶ ರವಾನಿಸಿವೆ,ಎಂದೂ  ಗ್ರಾಹಕರು ಆರೋಪಿಸಿದ್ದಾರೆ.

ಸ್ಥಿರ ದೂರವಾಣಿ ಇಂಟರ್ನೆಟ್ ಸೇವೆಯಲ್ಲಿ ಯಾವುದೇ ಪ್ರಗತಿಯಿಲ್ಲ, ಅಧಿಕಾರಿಗಳ ಪ್ರಕಾರ ಜನವರಿ 25 ರಂದು ಪುನರಾರಂಭಿಸಲಾಗಿದೆ ಎಂದೂ ಹೇಳಿದ್ದರೂ  ಬಿಳಿ ಪಟ್ಟಿ ಮಾಡಲಾದ ಸೈಟ್‌ಗಳಿಗೆ ಸೀಮಿತವಾದ ಸ್ಥಿರ ಲೈನ್ ಇಂಟರ್ನೆಟ್ ಸೇವೆಗೆ ಅನುಮತಿ ನೀಡುವುದಾಗಿ ಸರ್ಕಾರ ಘೋಷಿಸಿದೆ,  ಇದರಿಂದಾಗಿ  ಜನರು, ಗ್ರಾಹಕರು ಅನೇಕ ಸಮಸ್ಯೆ  ಎದುರಿಸುತ್ತಿದ್ದಾರೆ. 

ಸರ್ಕಾರದ ಆದೇಶ ಪ್ರಕಾರ ಇಮೇಲ್ ಸೇವೆ, ಬ್ಯಾಂಕಿಂಗ್ ವೆಬ್‌ಸೈಟ್, ಶಿಕ್ಷಣಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳು, ಉದ್ಯೋಗ ವೇದಿಕೆ , ಮನರಂಜನೆ, ಪ್ರವಾಸ ಮತ್ತು ಪ್ರಯಾಣ ಮತ್ತು ಹವಾಮಾನ ವೆಬ್‌ಸೈಟ್ ಸೇರಿದಂತೆ 300 ಬಿಳಿ ವೆಬ್‌ಸೈಟ್‌ಗಳನ್ನು ಪಟ್ಟಿ ಮಾಡಿದೆ. 

ಈ ನಡುವೆ  ಮಾಧ್ಯಮಗಳು ಮತ್ತು ಇತರ ವೃತ್ತಿಪರರು ಮತ್ತು ವಿದ್ಯಾರ್ಥಿಗಳು 2 ಜಿ ಮೊಬೈಲ್ ಸೇವೆಯಿಂದ ಅಷ್ಟೇನು ಸಹಾಯವಾಗಿಲ್ಲ  ಎಂದು ಆರೋಪಿಸಿದ್ದಾರೆ. 

ಇದರಿಂದ ಯಾವುದೆ  ಸೈಟ್‌ಗೆ ಪ್ರವೇಶ  ಹೊಂದಲು ಸಾಧ್ಯವಿಲ್ಲ, ಪದೇ ಪದೇ ಪ್ರಯತ್ನಿಸಿದರೂ ಫಲಸಿಗುವುದಿಲ್ಲ ಎಂದು  ಬೇಸರ ವ್ಯಕ್ತಪಡಿಸಿದರು. 

370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಆಗಸ್ಟ್ 5 ರಿಂದಲೂ   ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ಸಂವಹನ ಜಾಲಗಳನ್ನು ಅಮಾನತುಗೊಳಿಸಲಾಗಿತ್ತು.