ಸಾವಿತ್ರಿಬಾಯಿ ಪುಲೆ ಜಯಂತಿ ನಿಮಿತ್ತ 29 ಶಿಕ್ಷಕಿಯರಿಗೆ ಪ್ರಶಸ್ತಿ ಪ್ರಧಾನ ಅಕ್ಷರ ಮೊದಲ ತಾಯಿ ಸಾವಿತ್ರಿಬಾಯಿ ಪುಲೆ: ಶಾಸಕ ಸತೀಶ

ಬೆಳಗಾವಿ: ಅಕ್ಷರದ ಮೊದಲ ತಾಯಿ ಸಾವಿತ್ರಿಬಾಯಿ ಪುಲೆಯವರು ಮಹಿಳೆಯರಿಗೆ ಶಿಕ್ಷಣ ಒದಗಿಸಲು ದೇಶದ ಉದ್ದಕ್ಕೂ ಹೋರಾಟ ಮಾಡಿ ಶಿಕ್ಷಣ ಕಾಂತ್ರಿ ಮಾಡಿದವರು, ದೇಶದಲ್ಲಿ ಸರ್ವಧರ್ಮಗಳಿಗೂ ಶಿಕ್ಷಣ ಕಲಿಸಿದ ತಾಯಿ ಸಾವಿತ್ರಿ ಪುಲೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಭಾನುವಾರ 5 ರಂದು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ 2019-2020 ಸಾಲಿನ ಅಕ್ಷರದ ಅವ್ವ, ಸಾವಿತ್ರಿಬಾಯಿ ಫುಲೆ, ಹಾಗೂ ಆದರ್ಶ 29 ಶಿಕ್ಷಕಿಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 

ಮೇಲೂ, ಕೀಳು ಮೂಡನಂಬಿಕೆಗೆ ನಾಂದಿ ಹಾಡಿ, ದೇಶದ ಅಭಿವೃದ್ಧಿಗಾಗಿ ಮಹಿಳೆಯರಿಗೆ ಶಿಕ್ಷಣ ನೀಡಿದವರು. ಅವರು ವಿಚಾರ ದಾರೆಗಳು ಇಂದಿನ ಯುವಕರಿಗೆ ಸ್ಪೂತರ್ಿಯಾಗಿದೆ  ಆ ಹೋರಾಟ ಫಲವೇ ಎಲ್ಲ ಮಹಿಳೆಯರು ಪ್ರತಿ ರಂಗದಲ್ಲಿ ಬೆಳೆದು ನಿಂತಿದ್ದಾರೆ ಎಂದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ  ರವೀಂದ್ರ ನಾಯ್ಕರ್ ಮಾತನಾಡಿ, ಸಾವಿತ್ರಿಬಾಯಿ  ಫುಲೆ ಜಯಂತಿ ತಾಲೂಕಾ ಮಟ್ಟದಿಂದ ರಾಷ್ಟ್ರಮಟ್ಟದಲ್ಲಿ ಆಚರಿಸುವಂತಾಗಲಿ, ಅಲ್ಲಿಯ ವರೆಗೂ ನಮ್ಮ ಹೋರಾಟ ಮುಂದೆವರೆಯಲಿದೆ ಎಂದರು.

ಇಂದು ರಾಜ್ಯ ಸಕರ್ಾರ ಸಾವಿತ್ರಿಬಾಯಿ  ಫುಲೆ ಅವರ ಜಯಂತಿ ದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿಯೂ ಆಚರಿಸಬೇಕು.ಶಿಕ್ಷಣ ಪಡೆಯುವುದು ಅಪರಾಧ  ಎಂಬ ಸಂದರ್ಭದಲ್ಲಿ ಶಿಕ್ಷಣ ಪಡೆದವರು ಸಾವಿತ್ರಿ ಬಾಯಿ ಪುಲೆ ಅವರು. ಮಹಿಳೆಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಸಮಾಜವನ್ನೇ ಎದುರಿಸಿದವರು. 

  ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯನಿವರ್ಾಹಕ  ಸಂಜೀವ ತಳವಲಕರ ಮುಖ್ಯ ಅತಿಥಿಯಾಗಿ ಮಾತನಾಡಿ,   ದೇಶದಲ್ಲಿ ಜಾತಿ ಎಂಬ ಪಿಡುಗು ತಾಂಡವಾಡುತ್ತಿದೆ. ಮಹಾಪುರುಷರ ಜಯಂತಿಗಳು ಜಾತಿಗೆ ಸೀಮಿತವಾಗಿವೆ.  ಪ್ರಜ್ಞಾವಂತ ಜನರು ಜಾತಿ ಪಿಡುಗಿನಿಂದ ಹೊರ ಬಂದು ಮಾಹಾನ್ ನಾಯಕರ ಜಯಂತಿ ಆಚರಿಸುವುದರ ಜತೆಗೆ  ಅವರ ಆದರ್ಶಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯ ಹೋರಾಟ, ರಾಜಕೀಯ, ಸಾಮಾಜಿಕ ಹಾಗೂ ಭಾಷಾ ಚಳುವಳಿಯಲ್ಲಿಯೂ ಸ್ತ್ರೀಯರ ಕೊಡುಗೆ ಅಪಾರವಾಗಿದೆ. ಅವರ  ಸಾಲಿನಲ್ಲಿ ಸಾವಿತ್ರಿಬಾಯಿ ಫುಲೆ ಕೂಡ ಒಬ್ಬರು,  ಶಿಕ್ಷಣಕ್ಕೆ ಅಷ್ಟೇ ಸಿಮಿತವಾಗದೆ ಸಾಮಾಜಿಕ ಕಳಕಳಿ ಹೊಂದಿದ್ದರು.  ಅನಾಥ ಮಕ್ಕಳಿಗೆ ವಸತಿ ನಿಮರ್ಿಸಿದರು ಎಂದರು.

ಡಾ. ಚಂದ್ರಿಕಾ ಬಿ.ಕೆ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ  ದೀಪಕ ಕಾಂಬಳೆ, ಸಂಚಾಲಕ  ಜೀವನ ಮಾಂಜರೆಕರ್, ಮುಖ್ಯ ಅತಿಥಿ ಸಂಜೀವ ತಳವಳಕರ,   ಹಿರಿಯ ಪತ್ರಕರ್ತ ಆರ್.ಎಸ್. ದಗರ್ೆ, ವೇದಿಕೆ ವ್ಯವಸ್ಥಾಪಕ ರಾಮಕೃಷ್ಣ ಪಾನಬುಡೆ,  ಎ.ಜಿ. ಕಾಂಬಳೆ, ವಿಠ್ಠಲ ಭಜಂತ್ರಿ ಕಾಂತ್ರಿಗೀತೆ ಹಾಡಿದರು. ಪ್ರೊ. ಮಂಜುನಾಥ್ ಪಾಟೀಲ್ ಸ್ವಾಗತಿಸಿ , ನಿರೂಪಿಸಿದರು.