ಹುಬ್ಬಳ್ಳಿ 15: ಸಂತ ಶ್ರೀ ಸೇವಾಲಾಲ್ ಮಹಾರಾಜರ 286ನೇ ಜಯಂತಿ ನಿಮಿತ್ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಹಳೇ ಹುಬ್ಬಳ್ಳಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸತ್ಯ, ಅಹಿಂಸೆ, ದಯೆ, ಪ್ರಜ್ಞೆಗಳನ್ನು ಪವಿತ್ರವೆಂದುಒಪ್ಪಿಕೊಂಡುಯಾರುಕರ್ತವ್ಯವನ್ನು ಮಾಡುತ್ತಾರೋಅವರೇ ಧರ್ಮಿಗಳು, ಆದ್ದರಿಂದ ಪ್ರಕೃತಿಯೇ ಧರ್ಮ ಎಂದು ಸಾರಿದ ಮಹಾನ್ ತಪಸ್ವಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ್ಣ ಮಾಡಿ, ಪೂಜೆ ಸಲ್ಲಿಸಿ ಶ್ರದ್ಧಾ, ಭಕ್ತಿಯಿಂದ ನುಡಿಗಳ ಮೂಲಕ ಜೀವನ ಹಾಗೂ ಸಾಧನೆಗಳನ್ನು ಸ್ಮರಣೆ ಮಾಡಿ ಗೌರವಾರೆ್ಣ ಸಲ್ಲಿಸಲಾಯಿತು.
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಜಿ. ವಾಯ್.ಗೊಡ್ಡೆಮ್ಮಿ, ಶಿಕ್ಷಕಿ ಆರ್.ಆರ್. ಸಿದ್ದಾಪೂರ, ಶಿಕ್ಷಕ ಆರ್.ಐ. ನಿಕ್ಕಮ್ಮನವರ, ಶಿಕ್ಷಕಿಯರಾದ ಬಿ.ಜಿ.ಹಿರೇಮಠ, ಎಂ.ಎಚ್.ನದಾಫ್, ಪ್ರೀಯಾಂಕಾ ಕುಲಕರ್ಣಿ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ವಿದ್ಯಾರ್ಥಿನಿಯರಾದ ಅರ್ಚನಾ ಬಿಲಾನಾ, ಶ್ರೇಯಾತಿಮ್ಮಸಾಗರ, ಆರುಪಿ ಪಾಂಚಾಣ, ಮುಂತಾದವರು ಭಾಗವಹಿಸಿದ್ದರು.