ಲಂಡನ್ ನಿಂದ ಬರಲಿದ್ದಾರೆ 250 ಕನ್ನಡಿಗರು ಬೆಂಗಳೂರಿಗೆ

ನವದೆಹಲಿ,  ಮೇ 10,ಕೊರೊನಾ ಲಾಕ್ ಡೌನ್ ನಿಂದ ವಿವಿಧ ದೇಶಗಳಲ್ಲಿಸಿಲುಕಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ ಹಮ್ಮಿಕೊಳ್ಳಲಾಗಿದ್ದು, ಭಾನುವಾರ ಇಂಗ್ಲೆಂಡ್ ನಿಂದ ಕರ್ನಾಟಕಕ್ಕೆ 250 ಕನ್ನಡಿಗರು ಬೆಂಗಳೂರಿಗೆ ಬರಲಿದ್ದಾರೆ .ಬೆಳಗ್ಗೆ  ಲಂಡನ್ ನಿಂದ  ಹೊರಟಿರುವ  ವಿಶೇಷ ವಿಮಾನ   ರಾತ್ರಿ ಬೆಂಗಳೂರಿಗೆ ಬರಲಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿನೀಡಿದೆ.ಲಂಡನ್ ನಿಂದ ರಾಜ್ಯಕ್ಕೆ ಬರುವ ಕನ್ನಡಿಗರು ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಲಾಗಿದ್ದು, ಎ,ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಎ ಗ್ರೇಡ್ ಹೊಂದಿರುವವರು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಬಿ ಮತ್ತು ಸಿ ಗ್ರೇಡ್ ಹೊಂದಿರುವವರು ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ತಗುಲುವ   ವೆಚ್ಚವನ್ನು ಅವರೆ   ಭರಿಸಬೇಕಿದೆ.