ಜಮ್ಮು, ಫೆ 13 : ಯೂರೋಪಿಯನ್ ಒಕ್ಕೂಟ ಮತ್ತು ಗಲ್ಫ್ ರಾಷ್ಟ್ರಗಳ 25 ವಿದೇಶಿ ಪ್ರತಿನಿಧಿಗಳು ಜಮ್ಮು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿದ್ದು, ಸಂವಿಧಾನದ 370ನೇ ವಿಧಿಯ ರದ್ದತಿಯ ನಂತರದ ಸ್ಥಿತಿಗತಿಯ ಪರಿಶೀಲನೆ ನಡೆಸಿದರು.
ಗುರುವಾರ ಬೆಳಗ್ಗೆ ಆಗಮಿಸಿರುವ ಪ್ರತಿನಿಧಿಗಳು ಜಮ್ಮು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಪ್ರತಿನಿಧಿಗಳು ವ್ಯಾಪಾರಿಗಳು, ರಾಜಕಾರಣಿಗಳು, ರಾಜಕೀಯೇತರ ವ್ಯಕ್ತಿಗಳು, ಸಮಾಜಿಕ ಹಾಗೂ ನಾಗರಿಕ ಸಮಾಜಕ್ಕೆ ಸೇರಿದ 20 ಜನರನ್ನು ಭೇಟಿ ಮಾಡಲಿದ್ದಾರೆ.
ಈ ತಂಡದಲ್ಲಿ ಜರ್ಮನಿ, ಕೆನಡಾ, ಫ್ರಾನ್ಸ್, ನ್ಯೂಜಿಲೆಂಡ್, ಮೆಕ್ಸಿಕೋ, ಇಟಲಿ, ಅಫ್ಗಾನಿಸ್ತಾನ್, ಆಸ್ಟ್ರಿಯಾ, ಉಜ್ಬೇಕಿಸ್ತಾನ್, ಪೋಲೆಂಡ್ ಹಾಗೂ ಯೂರೋಪಿಯನ್ ಒಕ್ಕೂಟದ ಪ್ರತಿನಿಧಿಗಳಿದ್ದಾರೆ.
ಇದಕ್ಕೂಮುನ್ನ ಜ.9-10 ರಂದು ಅಮೆರಿಕದ ರಾಯಭಾರಿ ಕೆನ್ನೆತ್ ಜಸ್ಟರ್ ಸೇರಿದಂತೆ 15 ಪ್ರತಿನಿಧಿಗಳು ಜಮ್ಮುವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.