ಬೆಳಗಾವಿ 16: ಪ್ರತಿವರ್ಷ ಎಂಇಎಸ್ನ ನಾಡದ್ರೋಹಿಗಳು ರಾಜ್ಯೋತ್ಸವದ ದಿನದಂದು ಕರಾಳ ದಿನಾಚಾರಣೆ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಮತ ಬ್ಯಾಂಕಿಗಾಗಿ ಅವರ ಬೆಂಗಾವಲಾಗಿ ನಿಲ್ಲುವುದನ್ನು ಬಿಡಬೇಕು ಎಂದು ಕನರ್ಾಟಕ ನವನಿಮರ್ಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.
ಮಂಗಳವಾರ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಂಇಎಸ್ ನವರಿಗೆ ರಾಜಕಾರಣಿಗಳು ಕರಾಳ ದಿನಾಚಾರಣೆಗೆ ಅವಕಾಶ
ಕೊಡಬಾರದು. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ
ನೀಡಿದ್ದೆಯಾದರೇ ಕನಸೇ ಮಹಿಳಾ ಕಾರ್ಯಕರ್ತರು
ಒನಕೆ ಹಿಡಿದು ಕರಾಳ ದಿನಾಚಾರಣೆ ಹಿಡಿದು
ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಯಾವುದೇ
ಘಟನೆ ಸಂಭವಿಸಿದರೆ ನೇರವಾಗಿ ಜಿಲ್ಲಾಡಳಿತ ಹಾಗೂ ಸರಕಾರವೇ ಹೊಣೆಯಾಗುತ್ತದೆ
ಎಂದು ಎಚ್ಚರಿಸಿದರು. ಕರಾಳ ದಿನಾಚರಣೆಗೆ ಬೆಂಬಲಿಸುವ
ರಾಜಕಾರಣಿಗಳಿಗೆ ಯಾವುದೇ ಕನ್ನಡ ಸಂಘಟನೆಗಳು ಕಪಾಳ ಮೋಕ್ಷ ಮಾಡಿದರೆ
25 ಸಾವಿರ ಬಹುಮಾನ ನೀಡಲಾಗುವದು ಎಂದು ಭೀಮಾಶಂಕರ ಘೋಷಿಸಿದ್ದಾರೆ.
ಕರಾಳ
ದಿನಾಚಾರಣೆಯಲ್ಲಿ ಭಾಗಿಯಾದ ಎಂಇಎಸ್ ನವರಿಗೆ ಕನ್ನಡಿಗರು ಕಪಾಳ ಮೋಕ್ಷ ಮಾಡಿದರೆ
ಸೂಕ್ತ ಬಹುಮಾನ ನೀಡಲಾಗುವುದು. ರಾಜ್ಯೋತ್ಸವದ ಸಂದರ್ಭದಲ್ಲಿ ಎಂಇಎಸ್ಗೆ ಕರಾಳ ದಿನಾಚಾರಣೆಗೆ ಬೆನ್ನ
ಹಿಂದೆ ನಿಂತು ಅನುಮತಿ ನೀಡಿದರೆ ಕನಸೇ ಕಾರ್ಯಕರ್ತರು ಅಂಥ
ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಿದರೆ
25. ಸಾವಿರ ರೂ. ಬಹುಮಾನ ನೀಡಲಾಗುವುದು
ಎಂದರು. ಪ್ರತಿವರ್ಷ ಬೆಳಗಾವಿಯಲ್ಲಿ ಕನ್ನಡದ ಹಬ್ಬವನ್ನು ಆಚರಿಸಲು ಕಳೆದ ಆರು ತಿಂಗಳಿನಿಂದ
ಕನಸೇ ಸಿದ್ದತೆ ಮಾಡಿಕೊಳ್ಳಲಾಗಿದೆ.
40 ವರ್ಷಗಳಿಂದ
ಕನ್ನಡಿಗರಿಗೆಲ್ಲ ಕಾಡುತ್ತಿರುವ ಪ್ರಶ್ನೆ ಮಹಾರಾಷ್ಟ್ರದ ಹೋರಾಟಗಾರ ಬಾಪಟ್ ಅವರ ಉಪವಾಸಕ್ಕೆ ಮಣಿದ
ಕೇಂದ್ರ ಸರಕಾರ 1966ರಲ್ಲಿ ಮೆಹರಚಂದ್ ಮಹಾಜನ್ ರವರ ನೇತೃತ್ವದಲ್ಲಿ ಆಯೋಗವನ್ನು
ರಚಿಸಿತ್ತು. ಮಹಾರಾಷ್ಟ್ರದ ಅಂದಿನ ಸಿಎಂ ಆಗಿದ್ದ ಪಿ.ವಿ.ನಾಯಕ ಅವರು
ಆಯೋಗದ ವರದಿ ಹೇಗಿದ್ದರೂ ಅದನ್ನು
ಒಪ್ಪುವುದಾಗಿ ಘೋಷಣೆ ಮಾಡಿದ್ದರು. ಆದರೆ ವರದಿ ಬಂದ
ನಂತರ ತನ್ನ ನಿಲುವನ್ನು ಬದಲಿಸಿದ
ಮಹಾರಾಷ್ಟ್ರ ಸರಕಾರ ಗಡಿ ತಂಟೆಗೆ ಜೀವ
ತುಂಬುವ ಕೆಲಸ ಮಾಡುತ್ತ ಬಂದ
ಪಾಪದ ಕೂಸೆ ಈ
ಎಂಇಎಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ
ಸಂದರ್ಭದಲ್ಲಿ ಬಾಬು ಸಂಗೋಡಿ, ಆನಂದ,
ಗಿರೀಶ ಪೂಜಾರ, ಸುಷ್ಮಾ ಯಾದವಾಡ, ಶೋಭಾ,ನಾಗೇಶ ಸೇರಿದಂತೆ
ಇನ್ನಿತರರು ಉಪಸ್ಥಿತರಿದ್ದರು.