ಮಾನವ ಕುಲವನ್ನೇ ಉದ್ಧರಿಸಿದ ಮಹಾವೀರರು: ರಮೇಶ ಅಳಗುಂಡಿ

24th Tirthankara Lord Mahavir Jayanti

ಬೆಟಗೇರಿ 10: ಅಹಿಂಸೆಯೇ ಶಾಂತಿಗೆ ಮಾರ್ಗ ಎಂದು ಭೋಧಿಸಿದ 24ನೇ ತಿರ್ಥಂಕರ ಭಗವಾನ ಮಹಾವೀರರು ಮಾನವ ಕುಲವನ್ನೇ ಉದ್ದರಿಸಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.  

ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏ.10ರಂದು ನಡೆದ 24ನೇ ತಿರ್ಥಂಕರ ಭಗವಾನ ಮಹಾವೀರ ಜಯಂತಿ ಆಚರಣೆ ಕಾರ‌್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅವರು, ಭಗವಾನ ಮಹಾವೀರರ ಭಾವಚಿತ್ರಕ್ಕೆ, ಪು​‍್ಪಾರೆ್ಪನ, ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ನೀನು ಜೀವಿಸು, ಇತರರಿಗೂ ಜೀವಿಸಲು ಅವಕಾಶ ಕೊಡು, ಅಹಿಂಸೆ ತಾಯಿಯಂತೆ ಎಲ್ಲಾ ಜೀವಿಗಲ ಹಿತವನ್ನು ಬಯಸುತ್ತದೆ. ಯಾವ ಜೀವಿಯನ್ನು ಕೊಲ್ಲಬೇಡ ಎಂದು ಭಗವಾನ್ ಮಹಾವೀರರು ಹೇಳಿದ್ದಾರೆ ಎಂದರು. 

ಮಲ್ಹಾರಿ ಪೋಳ ಸೇರಿದಂತೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಅತಿಥಿ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.