ಬೆಂಗಳೂರು, ಡಿ.17 : ದಿನದ 24 ಗಂಟೆಯೂ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಪೇಟಿಎಂ ಒದಗಿಸಿದೆ. ಈ ಮೂಲಕ 24ಥ7 ನೆಫ್ಟ್ ವರ್ಗಾವಣೆ ಸೌಲಭ್ಯ ಒದಗಿಸಿರುವ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ನೆಫ್ಟ್ ಮೂಲಕ ಹಣ ವರ್ಗಾವಣೆಗೆ ಮಾಡುವ ಪ್ರಕ್ರಿಯೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 24 ಗಂಟೆಯು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪೇಟಿಎಂ ನೆಫ್ಟ್ ವರ್ಗಾವಣೆಯನ್ನು ದಿನದ 24 ಗಂಟೆಯೂ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಗ್ರಾಹಕರು ನೆಫ್ಟ್ ಮೂಲಕ 10 ಲಕ್ಷ ವರೆಗೆ ಹಣ ವರ್ಗಾವಣೆ ಮಾಡಬಹುದು. ವೀಕ್ ಎಂಡ್ ಮತ್ತು ರಜಾ ದಿನಗಳನ್ನು ಹೊರತು ಪಡಿಸಿ, ಉಳಿದ ದಿನದ ಎಲ್ಲಾ ಸಮಯದಲ್ಲಿ ನೆಫ್ಟ್ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಚಾಲನೆ ನೀಡಿದೆ. ಭಾರತೀಯ ರಿಜರ್ವ್ ಬ್ಯಾಂಕ್ ನ ಈ ನಿಯಮವನ್ನು ನಾವು ಸ್ವಾಗತಿಸುತ್ತೇವೆ. ಈ ಸೌಲಭ್ಯವನ್ನು ಒದಗಿಸಲು ನಾವು ಸಶಕ್ತರಾಗಿದ್ದೇವೆ. ಗ್ರಾಹಕರಿಗೆ ನಾವು ಎಲ್ಲಾ ರೀತಿಯ ಪಾವತಿ ಸೌಲಭ್ಯವನ್ನು ಒದಗಿಸಿದ್ದೇವೆ. ಈ ಹೊಸ ಸೌಲಭ್ಯದ ಪರಿಣಾಮ ಹೆಚ್ಚೆಚ್ಚು ಗ್ರಾಹಕರು ಪೇಟಿಎಂ ವೇದಿಕೆ ಬಳಸಿ ಪಾವತಿ ಮಾಡುತ್ತಾರೆ ಎನ್ನುವ ವಿಶ್ವಾಸ ನಮ್ಮದು ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಎಂಡಿ ಮತ್ತು ಸಿಇಒ ಸತೀಶ್ ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.