ಬಳ್ಳಾರಿ,ಮೇ 12: ಬಳ್ಳಾರಿ ನಗರದ 13 ವಲಯಗಳಲ್ಲಿ ಮತ್ತು ಹೊಸಪೇಟೆ ನಗರದ 07 ವಲಯಗಳಲ್ಲಿ 24*7 ನಿರಂತರ ಕುಡಿಯುವ ನೀರು ಸರಬರಾಜು ಜೂ.29ರಿಂದ ಸಾರ್ವಜನಿಕರ ಸೇವೆಗೆ ಅರ್ಪಣೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇನ್ನೂ ಒಂದು ತಿಂಗಳೊಳಗೆ ಈ ವಲಯಗಳಲ್ಲಿ 24*7 ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಕೆಲಸಗಳು ಮುಗಿಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ವತಃ ನಾನೇ ಜೂ.29ರಂದು ಈ ಎರಡು ನಗರಗಳಲ್ಲಿ ಚಾಲನೆ ನೀಡುತ್ತೇನೆ ಎಂದು ಹೇಳಿದ ಅವರು ಇದಕ್ಕೆ ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ಬಳ್ಳಾರಿಯಲ್ಲಿ ಮೊದಲ ಹಂತದಲ್ಲಿ ಕೈಗೊಳ್ಳಲಾದ 28 ವಲಯಗಳಲ್ಲಿ 13 ವಲಯಗಳಲ್ಲಿ ನೀರು ಸರಬರಾಜು ಆರಂಭವಾಗಲಿದ್ದು,ಉಳಿದ ವಲಯಗಳಲ್ಲಿ ಡಿಸೆಂಬರ್ ಒಳಗೆ ಸರಬರಾಜು ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
28 ವಲಯ ಹೊರತುಪಡಿಸಿ ಇನ್ನೂ ಬಾಕಿ ಉಳಿದ 15 ವಲಯಗಳಿಗೆ 24*7 ನೀರು ಸರಬರಾಜು ನೀಡಲು ಯೋಜನಾ ವರದಿ ತಯಾರಿಸಲು ನೀರು ಸರಬರಾಜು ಮಂಡಳಿಗೆ ನೀಡಲಾಗಿದ್ದು, ಇದಕ್ಕಾಗಿ 22.5ಕೋಟಿ ರೂ.ಗಳನ್ನು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿ ಕಾಯ್ದಿರಿಸಲಾಗಿದ್ದು,ಡಿಪಿಎಆರ್ ಬಂದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಚಿವರ ಗಮನಕ್ಕೆ ತಂದರು.
*ಅನಧಿಕೃತ ಕಟ್ಟಡಗಳ(ಆಸ್ತಿ) ಸಮೀಕ್ಷೆ ಮಾಡಿ:
ಬಳ್ಳಾರಿ ನಗರದ ವಾಡರ್್ ಸಂಖ್ಯೆ 1ರಲ್ಲಿ ಪ್ರಾಯೋಗಿಕವಾಗಿ ಅನಧಿಕೃತ ಕಟ್ಟಡಗಳ(ಆಸ್ತಿ) ಸಮೀಕ್ಷೆ ಮಾಡಿದಂತೆ ಇಡೀ ನಗರದಲ್ಲಿರುವ ಎಲ್ಲ ವಾಡರ್್ಗಳಲ್ಲಿಯೂ ಇದೇ ರೀತಿಯ ಸಮೀಕ್ಷೆ ಮಾಡಿ ಒಂದು ತಿಂಗಳೊಳಗೆ ವರದಿ ಕೊಡಿ ಎಂದು ಸಚಿವ ಭೈರತಿ ಬಸವರಾಜು ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪ್ರಾಯೋಗಿಕವಾಗಿ ವಾಡರ್್ ಸಂ.1ರಲ್ಲಿ ಸಮೀಕ್ಷೆ ನಡೆಸಿದ್ದಾಗಲೇ ಅಲ್ಲಿ ಶೇ.50ರಷ್ಟು ಅನಧಿಕೃತ ಕಟ್ಟಡಗಳು(ಆಸ್ತಿಗಳು) ಇರುವುದು ಕಂಡುಬಂದಿದೆ. ಇಡೀ ನಗರದಾದ್ಯಂತ ಮಾಡಿದಾಗ ಎಷ್ಟಾಗಬಹುದು ಮತ್ತು ಇದರಿಂದ ಪಾಲಿಕೆಗೆ ಯಾವ ಮಟ್ಟದಲ್ಲಿ ತೆರಿಗೆ ಸಂಗ್ರಹ ನಷ್ಟವಾಗುತ್ತದೆ ಎಂಬುದನ್ನು ಅಂದಾಜಿಸಲು ಸಾಧ್ಯ. ಅದನ್ನು ಆಧರಿಸಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಮುಂದಾಗಬೇಕು ಎಂದು ಅವರು ಶಾಸಕರ ಅಭಿಪ್ರಾಯಗಳಿಗೆ ದನಿಗೂಡಿಸಿ ಅವರು ಮಾತನಾಡಿದರು.
*ಬಳ್ಳಾರಿ ಸ್ಮಾಟರ್್ ಸಿಟಿ ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೆ ಚಚರ್ೆ: ಬಳ್ಳಾರಿ ನಗರ ದಿನೇದಿನೆ ಬೆಳೆಯುತ್ತಿದ್ದು, ಈ ನಗರವನ್ನು ಸ್ಮಾಟರ್್ ಸಿಟಿಗೆ ಸೇರಿಸುವಂತೆ ಕೋರಿ ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೆ ಚಚರ್ಿಸಲಾಗುವುದು ಎಂದು ಸಚಿವ ಭೈರತಿ ಬಸವರಾಜು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಇದಕ್ಕೆ ದನಿಗೂಡಿಸಿ ಇದಕ್ಕೆ ಬೇಕಾದ ಅಗತ್ಯ ವರದಿಗಳನ್ನು ಅಧಿಕಾರಿಗಳು ಕಳುಹಿಸಿಕೊಡಿ ಎಂದರು.
ಬಳ್ಳಾರಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಪ್ಪತ್ತು-ಮೂವತ್ತು ವರ್ಷಗಳಷ್ಟು ಹಳೆಯದಾಗಿದ್ದು,ಅದನ್ನು ಹೊಸದಾಗಿ ಮಾಡುವ ನಿಟ್ಟಿನಲ್ಲಿ ಶಾಸಕರು ಸಭೆಯಲ್ಲಿ ಕೋರಿದ ಹಿನ್ನೆಲೆ ಸಚಿವ ಭೈರತಿ ಬಸವರಾಜು ಅವರು ಇದರ ವರದಿಯನ್ನು ಕೂಡಲೇ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿದರ್ೇಶಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅವರು 5 ಸಾವಿರಕ್ಕೂ ಹೆಚ್ಚು ವ್ಯಾಪಾರ(ಉದ್ದಿಮೆ) ಪರವಾನಿಗೆ ನೀಡಲಾಗಿದ್ದು,ಇದರಿಂದ 73 ಲಕ್ಷಕ್ಕೂ ಹೆಚ್ಚು ರೂ ಸಂಗ್ರಹವಾಗಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತು ನಗರದಾದ್ಯಂತ ಜಾಗೃತಿ ಮೂಡಿಸಲಾಗಿದ್ದು,ಇದುವರೆಗೆ ಉಲ್ಲಂಘಿಸಿದಕ್ಕಾಗಿ 1ಲಕ್ಷ ರೂ. ದಂಡ ವಿಧಿಸಲಾಗಿರುವುದನ್ನು ಸಭೆಯ ಗಮನಕ್ಕೆ ತಂದರು.
*ಅನ್ಯರಾಜ್ಯಗಳ 1093 ಜನರಿಗೆ ಕ್ವಾರಂಟೈನ್: ಅನ್ಯರಾಜ್ಯಗಳಿಂದ ಬಳ್ಳಾರಿ ಜಿಲ್ಲೆಗೆ 1093 ಜನರು ಬಂದಿದ್ದು, ಅವರನ್ನು ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಚಿವ ಭೈರತಿ ಬಸವರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಗಮನಕ್ಕೆ ತಂದರು.
6.5ಕೋಟಿ ರೂ.ಗಳನ್ನು ಕೋವಿಡ್ ಆಸ್ಪತ್ರೆಗಾಗಿ ಇದುವರೆಗೆ ಖಚರ್ು ಮಾಡಲಾಗಿದ್ದು, ಇದುವರೆಗೆ 16 ಪ್ರಕರಣಗಳು ದೃಢಪಟ್ಟಿದ್ದು, ಅವರಲ್ಲಿ 12 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 4 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಡಾದಿಂದ ಗೋನಾಳ್ ಬಳಿ 102 ಎಕರೆಯಲ್ಲಿ ಹೊಸ ಬಡಾವಣೆ ಶೀಘ್ರ ಕ್ಯಾಬಿನೆಟ್ನಿಂದ ಅನುಮೋದನೆ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿ.ಗೋನಾಳ್ ಗ್ರಾಮದ ಬಳಿ 102 ಎಕರೆ ಪ್ರದೇಶದಲ್ಲಿ 700 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಹಾಗೂ ಕೊಳಗಲ್ಲು ಬಳಿ 21 ಎಕರೆಯಲ್ಲಿ 14.28ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು,ಇದಕ್ಕೆ ಈಗಾಗಲೇ ನಾನು ಒಪ್ಪಿಗೆ ನೀಡಿದ್ದು, ಶೀಘ್ರ ಸಚಿವ ಸಂಪುಟದ ಮುಂದೆ ಬರಲಿದ್ದು,ಅನುಮೋದನೆ ದೊರಕಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ,ಶಾಸಕರಾದ ಸೋಮಲಿಂಗಪ್ಪ, ಬಿ.ನಾಗೇಂದ್ರ,ಸೋಮಶೇಖರ ರೆಡ್ಡಿ,ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ,ಎಸ್ಪಿ ಸಿ.ಕೆ.ಬಾಬಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು