ಲೋಕದರ್ಶನ ವರದಿ
ಘಟಪ್ರಭಾ 26: ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಿಜವರಿದ ಸಂತ,ಸದು ಹೃದಯವಂತ,ಸಾಹಿತ್ಯ ಶ್ರೀಮಂತ ಪೂಜ್ಯ ನಿಜಗುಣ ದೇವರ ಗುರುಗಳಾದ ಸಿದ್ಧಲಿಂಗ ಯತಿರಾಜರ ದಿವ್ಯ ಕೃಪಾ ಬೆಳಗಿನಲ್ಲಿ ಸಿದ್ಧಲಿಂಗೇಶ್ವರ ರಥೋತ್ಸವ, 21 ಸತ್ಸಂಗ ಮಹೋತ್ಸವ,ಸಿದ್ದಲಿಂಗ ಅಪ್ಪನ ಜಾತ್ರೆಯು ದಿ. 2020 ಜನೇವರಿ 1ರಿಂದ 3ರವರೆಗೆ ಜರುಗಲಿದ್ದು ನಾಡಿನ ಮಹಾತ್ಮರು ಹಾಗೂ ಜನಪ್ರತಿನಿಧಿಗಳು,ಗಣ್ಯರು ಆಗಮಿಸುವರೆಂದು ಹುಕ್ಕೇರಿಯ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಅವರು ಗುರುವಾರದಂದು ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿಯವರು 80ನೇ ಜನ್ಮ ದಿನಾಚರಣೆ ಆಚರಿಸಲಾಗುವುದು. ತೋಟ್ಟಿಲೋತ್ಸವ ಜರುಗುವುದು.
ಸಮಾರಂಭಕ್ಕೆ ಆದಿಚುಂಚನಗಿರಿಯ ಶಾಖಾಮಠ ಹಾಸನದ ಶಂಭುನಾಥ ಮಹಾಸ್ವಾಮಿಜಿ ಹಾಗೂ ಶಿವಪುತ್ರನಾಥ ಮಹಾಸ್ವಾಮಿಜಿ, ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ, ಸೇರಿದಂತೆ ನಾಡಿನ ಮಹಾತ್ಮರು ಪಾಲ್ಗೊಳ್ಳುವರು. ಗಣ್ಯರಾದ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ದುಯರ್ೋಧನ ಐಹೊಳೆ, ಮಾಜಿ ಸಚಿವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಕೌಜಲಗಿ ಸೇರಿದಂತೆ ಸಚಿವರು,ಶಾಸಕರು, ಜನಪ್ರತಿನಿಧಿಗಳು, ಸಾಹಿತಿಗಳು, ಅಧಿಕಾರಿಗಳು ಆಗಮಿಸುವರು. ನಾಡಿನ ವಿವಿದಡೆಯಿಂದ ಭಕ್ತಾಧಿಗಳು ಆಗಮಿಸುವರು.
ಮಾತಾ ಅನ್ನಪೂಣೇಶ್ವರಿ ನಿಲಯದ ಉದ್ಘಾಟನೆ, ರಥದ ಕಳಸಾರೋಹಣ, ದೇವಿಯರ ಕನ್ಯಾ ಪೂಜೆ, ಮುತೈದೆಯರ ಉಡಿ ತುಂಬುವುದು, ಸಹಸ್ರ ಕುಂಭೋತ್ಸವ, ಲಕ್ಷ ದೀಪೋತ್ಸವ, ತುಲಾಭಾರ ಸೇವೆ, ಸಾಮೂಹಿಕ ವಿವಾಹ, ಸನ್ಮಾನ, ಸತ್ಸಂಗ ಸಮ್ಮೇಳನ, ಮಹಾತ್ಮರ ತತ್ವಾಮೃತ, ತೊಟ್ಟಿಲೋತ್ಸವ, ಸಿದ್ಧಲಿಂಗೇಶ್ವರ ರಥೋತ್ಸವ,ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು ಮಾತನಾಡಿ ಕಳೆದ ವರ್ಷ 25 ವರ್ಷಗಳ ಸಾಧನ ಸಂಭ್ರಮ ಕಾರ್ಯಕ್ರಮವು ಅಭೂತಪೂರ್ವವಾಗಿ ನಡೆದುಕೊಂಡು ಬಂದಿದ್ದು, ಒಂದು ಆಶ್ರಮ, ದೇವಸ್ಥಾನವು ನಿಮರ್ಾಣವಾಗಬೇಕಾದರೆ ಸಾಮಾಜಿಕ,ಧಾಮರ್ಿಕ, ಶೈಕ್ಷಣಿಕವಾಗಿ ನಡೆಸಿಕೊಂಡ ಬಂದ ಶ್ರೀಮಠದ ಪೂಜ್ಯ ನಿಜಗುಣ ದೇವರ ಸಾಧನೆ ಮಹತ್ವದ್ದಾಗಿದೆ. ಶ್ರೀಮಠದಲ್ಲಿ ಯಾವುದೇ ಜಾತಿ,ಬೇಧ ಭಾವವಿಲ್ಲದೇ ಇಡೀ ಭಕ್ತ ಸಮೂಹವೇ ಎಲ್ಲರೂ ಒಂದೇ ಎಂಬ ಸಮಾನ ಮನೋಭಾವವನ್ನು ಹೊಂದಿ 26 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ.
ಶ್ರೀಮಠದ ಪೂಜ್ಯ ನಿಜಗುಣ ದೇವರು ಮಾತನಾಡಿ ಈ ವರ್ಷ ಇಂಚಲದ ಡಾ: ಶಿವಾನಂದ ಭಾರತಿ ಮಹಾಸ್ವಾಮಿಜಿಯವರ 80ನೇ ಜನ್ಮ ದಿನೋತ್ಸವ ಆಚರಿಸುತ್ತೇವೆ. ಸಿದ್ದಲಿಂಗ ಕೈವಲ್ಯಾಶ್ರಮವನ್ನು ಸ್ಥಾಪಿಸಿ ಇವತ್ತಿಗೆ 26 ವರ್ಷಗಳು ಗತಿಸಿದವು.
ಭಕ್ತ ಸಮೂಹದ ಪ್ರೀತಿ,ಸಹಕಾರದ ಅಪ್ಪನ ಜಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಮಾಡಬೇಕೆನ್ನುವ ನಿಧರ್ಾರ ಮಾಡಿ ಈ ಭಾಗದ ಶಾಸಕರು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ಗ್ರಾಮ ಪಂಚಾಯತ ಜನಪ್ರತಿನಿಧಿಗಳು, ಬೈಲಹೊಂಗಲದ ಶಿವಾನಂದ ಕೌಜಲಗಿ, ಹುಕ್ಕೇರಿ ಶ್ರೀಗಳು, ತೊಂಡಿಕಟ್ಟಿ ಶ್ರೀಗಳು ಬೆನ್ನಲುಬಾಗಿ ನಿಂತು ಜಾತ್ರಾ ಮಹೋತ್ಸವ ಸಮಾರಂಭವನ್ನು ಯಶಸ್ವಿಯಾಗಿ ಮಾಡಲಿದ್ದಾರೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷ ವೈ.ಬಿ.ನಾಯ್ಕ, ಸದಸ್ಯರುಗಳಾದ ಅಜರ್ುನ ನನ್ನಾರಿ, ಹಣಮಂತ ಶೆಕ್ಕಿ, ಬಸಗೌಡ ನಾಯಿಕ, ಮುಖಂಡ ರಾಮನಾಯ್ಕ ನಾಯ್ಕ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.