2020ರ ಡಕಾರ್ ರ್ಯಾಲಿ: ಟಿವಿಎಸ್ ರ್ಯಾಲಿ ಫ್ಯಾಕ್ಟರಿ ತಂಡ ಪ್ರಕಟ

 ಬೆಂಗಳೂರು, ಅ 19:     ಸೌಧಿ ಅರೇಬಿಯಾದಲ್ಲಿ ಮುಂದಿನ ವರ್ಷ ಜನವರಿ 5 ರಿಂದ 17ರವರೆಗೆ ನಡೆಯುವ ಡಕಾರ್ ರ್ಯಾಲಿಯಲ್ಲಿ ಭಾಗವಹಿಸುವ ನಾಲ್ಕು ಮಂದಿ ರೈಡರ್ಗಳನ್ನು ಶೆರ್ಕೋ ಟಿವಿಎಸ್ ರ್ಯಾಲಿ ಫ್ಯಾಕ್ಟರಿ ತಂಡ ಶುಕ್ರವಾರ ಪ್ರಕಟಿಸಿದೆ. ಗೋವಾದ ಮೋಟೊಸೋಲ್-2019ನಲ್ಲಿ ಫ್ರಾನ್ಸ್ನ ಮಿಚೆಲ್ ಮೆಟ್ಗೆ, ಎಂಡುರೋ ಚಾಂಪಿಯನ್ ಲೊರೆಂಜೊ ಸ್ಯಾಂಟಲಿನೋ(ಸ್ಪೇನ್) ಹಾಗೂ ಫ್ರಾನ್ಸ್ನ ಮತ್ತೊಬ್ಬ ರೈಡರ್ ಜಾನ್ನಿ ಯೂಬರ್ಟ್ ಅವರು ಟಿವಿಎಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಭಾರತದ  ಹರಿತ್ ನೋವ್ ಅವರು ಡಕಾರ್ ರ್ಯಾ ಲಿಯಲ್ಲಿ ಚೊಚ್ಚಲ ಪದಾರ್ಪಣೆ ಮಾಡಲಿದ್ದಾರೆ. ಟಿವಿಎಸ್ ರ್ಯಾಲಿ ಫ್ಯಾಕ್ಟರಿ ತಂಡ ಮೆಜರ್ೌಗಾ ರ್ಯಾಲಿ, ಡೆಸಾರ್ಟ್ ಸ್ಟ್ರೋಮ್, ಬಾಜ ಅಗರ್ೊನ್ ಸೇರಿದಂತೆ 2019ರ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದೆ. ಇದೀಗ, 2020ರ ಡಕಾರ್ ರ್ಯಾಲಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಯೋಜನೆಯಲ್ಲಿ ಕಣಕ್ಕೆ ಇಳಿಯಲು ಟಿವಿಎಸ್ ರ್ಯಾಲಿ ಫ್ಯಾಕ್ಟರಿ ತಂಡ ಎದುರು ನೋಡುತ್ತಿದೆ. ಶೆರ್ಕೋ ಟಿವಿಎಸ್ ಫ್ಯಾಕ್ಟರಿ ತಂಡದ ಮುಂಚೂಣಿ ರೈಡರ್ ಮಿಚೆಲ್ ಮೆಟ್ಗೆ ಅವರು ಪ್ರಸಕ್ತ ವರ್ಷದಲ್ಲಿ ಏಳು ಬಾರಿ ಭಾಗವಹಿಸಿದ್ದಾರೆ. ಲೊರೆಂಜೊ ಸ್ಯಾಂಟೋಲಿನಾ ಅವರ ಪಾಲಿಗೆ ಡಕಾರ್ ರ್ಯಾಲಿ ಎರಡನೇಯದಾಗಿದೆ. 35 ವರ್ಷ ಅನುಭವಿ 2018ರ ಡಕಾರ್ ರ್ಯಾಲಿಯಲ್ಲಿ ಆರನೇ ಸ್ಥಾನ ಪಡೆದಿದ್ದ ಜಾನ್ನಿ ಯೂಬರ್ಟ್ ಅವರಿಗೆ ಟಿವಿಎಸ್ ಸ್ವಾಗತ ನೀಡಿದೆ. ನಾಲ್ಕನೇ ರೈಡರ್ ಹರಿತ್ ನೋಹ್ ಅವರು ಭಾರತದ ಬುಹುಮುಖ ಪ್ರತಿಉಭೆಯಾಗಿದ್ದಾರೆ.  2019ರ ಡಕಾರ್ ರ್ಯಾಲಿ ಪೂರ್ಣಗೊಳಿಸಿದ್ದ ಭಾರತದ ಅರವಿಂದ್ ಕೆ.ಪಿ ಅವರು 2006 ರಿಂದ ಟಿವಿಎಸ್ ತಂಡದಲ್ಲಿ ಇದ್ದರು. ಈ ಬಾರಿ ಗಾಯದಿಂದಾಗಿ 2020ರ ಡಕಾರ್ ರ್ಯಾಲಿಯಿಂದ ಹೊರಗುಳಿಯಲಿದ್ದಾರೆ.