ಲೋಕದರ್ಶನ ವರದಿ
ಬೈಲಹೊಂಗಲ 17: ದೇಶದ ಪ್ರಜೆಗಳ ರಕ್ಷಣೆ, ರಾಷ್ಟ್ರೀಯ ಭದ್ರತೆ ಮತ್ತು ಮುಸ್ಲಿಂ ಬಹುಳ್ಯದ ಪಾಕ, ಅಫ್ಘಾನ್, ಬಾಂಗ್ಲಾಗಳಿಂದ ತಮ್ಮ ಜೀವ ರಕ್ಷಣೆಗಾಗಿ ಬಂದ ಹಿಂದೂ, ಪಾಸರ್ಿ, ಜೈನ್, ಸಿಖ್, ಬೌದ್ದ, ಕ್ರೈಸ್ತ ಧಮರ್ಿಯ ಸುಮಾರು 33ಸಾವಿರ ಜನರ ರಕ್ಷಣೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ 2019ಜಾರಿಗೆ ತರಲಾಗಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಾಣಿಜ್ಯ ಮತ್ತು ಕಲಾ ಪದವಿ ಪೂರ್ವ ಕಾಲೇಜ ವಿದ್ಯಾಥರ್ಿಗಳಿಗೆ ಹಮ್ಮಿಕೊಂಡಿದ್ದ ಮಿಂಚಿನ ಮತದಾರ ನೊಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ2019ರ ಅಗತ್ಯತೆ ಮತ್ತು ವಾಸ್ತವಿಕತೆಯ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಭಾರತ ಸ್ವತಂತ್ರವಾದಾಗ ಧಮರ್ಾದಾರಿತ ಪಾಕಿಸ್ತಾನ, ಬಾಂಗ್ಲಾ, ಅಫ್ಘಾನ್ ದೇಶಗಳಾಗದಿದ್ದರೆ ಇಂದು ಈ ದೇಶಗಳ ಮುಸ್ಲಿಂರನ್ನು ಈ ಕಾಯ್ದೆ ಇಂದ ಹೊರಗಿಡುವ ಪ್ರಮಯವೆ ಬರುತ್ತರಲಿಲ್ಲ ಎಂದರು.
ಪಾಕಿಸ್ತಾನದಲ್ಲಿ ಪ್ರತಿಶತ 13 ಬಾಂಗ್ಲಾದೇಶದಲ್ಲಿ ಪ್ರತಿಶತ 22 ರಷ್ಟಿದ್ದ ಹಿಂದುಗಳ ಜನಸಂಖ್ಯೆ ಇಂದು ಪ್ರತಿಶತ 1.6ರಷ್ಟಾಗಿರುವ ವರದಿ ಮೈಯಲ್ಲಿ ನಡಕು ಹುಟ್ಟಿಸುತ್ತದೆ. ಆ ದೇಶಗಳಲ್ಲಿ ಜಾತಿ, ಧರ್ಮದ ಆದಾರದ ಮೇಲೆ ಎಂತಹ ಕೌರ್ಯ, ಕಗ್ಗೊಲೆ ನಡೆದಿರಬಹುದು ಎಂಬುವದು ತಿಳಿಯುತ್ತದೆ ಎಂದರು. ಭಾರತ ಸ್ವಾತಂತ್ರ್ಯಪಡೆದಾಗ ಪ್ರತಿ ಶತ3 ರಷ್ಟಿದ್ದ ಮುಸ್ಲಿಂರ ಜನಸಂಖ್ಯೆ ಇಂದು ಪ್ರತಿಶತ 17ರಷ್ಟಿದೆ. 1950 ರಲ್ಲಿ ಪಾಕ್ ಅಧ್ಯಕ್ಷ ಲಿಯಾಕತ್ ನಮ್ಮ ಪ್ರಧಾನಿ ನೆಹರು ಅವರ ನಡುವೆ ಮಾಡಿಕೊಂಡ ನೆಹರು_ಲಿಯಾಕತ್ ಒಪ್ಪಂದ 1950 ಇನ್ನುವರೆಗೆ ಭಾರತದಲ್ಲಿ ಅಕ್ಷರಶಃ ಅನುಷ್ಠಾನದಲಿದ್ದರೆ ಪಾಕ್ ನಲ್ಲಿ ಸಂಪೂರ್ಣವಾಗಿ ಕೈ ಬಿಟ್ಟಿರುವದರಿಂದ ಹಿಂದೂಗಳ ಮಾರಣಹೋಮ ನಡೆದಿದೆ.
ಈ ಎಲ್ಲ ಅಂಶಗಳನ್ನು ಮನಗಂಡು ಕೇಂದ್ರ ಸಕರ್ಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯಿಂದ ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ (ಎನ್ ಆರ್ ಸಿ) ಇಂದ ಭಾರತದ ಮುಸ್ಲಿಂರಿಗೆ ಯಾವುದೆ ತೊಂದರೆಯಾಗುವದಿಲ್ಲ. ಅನ್ಯ ರಾಷ್ಟ್ರದಿಂದ ಅತಿಕ್ರಮವಾಗಿ ಬಂದ ನುಸುಳಕೊರ ಉಗ್ರವಾದಿಗಳಿಗೆ, ದೊಂಬಿ ಹುಟ್ಟುಹಾಕುವ ವ್ಯಕ್ತಿಗಳಿಗೆ ಈ ಕಾಯ್ದೆ ಅನ್ವಯವಾಗಲಿದೆ ಎಂದರು.
ಮಹಿಳಾ ಪದವಿ ಕಾಲೇಜ ಪ್ರಾ.ಪ್ರಸನ್ ಸಿಂಗ್ ಹಜೇರಿ ಮಾತನಾಡಿ, ಭಾರತೀಯರಿಗೆ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಾಜಕೀಯ ಶಕ್ತಿ ಹಾಗೂ ದೇಶದಲ್ಲಿ ಸ್ಥಳೀಯ ಸಂಸ್ಥೆಯಿಂದ ಸಂಸದೀಯ ಸದಸ್ಯರ ಆಯ್ಕೆ ಮತ್ತು ಸ್ಪಧರ್ಿಸುವ ಅಧಿಕಾರ ಮತದಾನದಿಂದ ಲಭಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದಶರ್ಿ ಜಿ.ಎ.ವಾಲಿ ಮಾತನಾಡಿ, ಇಂದಿನ ಯುವವಿದ್ಯಾಥರ್ಿಗಳು ಮುಂದಿನ ದೇಶದ ಭವಿಷ್ಯದ ಭಾವಿ ನಾಯಕರಾಗಿದ್ದು ಬೃಷ್ಟರಹಿತ ಚುನಾವಣೆ ನಡೆದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾಥರ್ಿಗಳು ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಅನಿಯಾಗಬೇಕೆಂದರು.
ವೇದಿಕೆಯ ಮೇಲೆ ಪ್ರಾಚಾರ್ಯ ಎನ್.ಬಿ. ಮುದಿಗೌಡರ ಇದ್ದರು. ಸಿಬ್ಬಂದಿಗಳಾದ ಎಸ್.ಜಿ.ಮರಕುಂಬಿ, ಸಿ.ಎಮ್.ಗೊರವರ, ಜ್ಯೋತಿ ಮ್ಯಾಗಟ್ಟಿ ಹಾಗೂ ನೂರಾರು ವಿದ್ಯಾಥರ್ಿಗಳು ಇದ್ದರು. ಶೃತಿ ಉಪ್ಪಿನ ಸ್ವಾಗತಿಸಿದರು. ಬಿ.ಎಮ್.ಗಾಣಿಗೇರ ನಿರೂಪಿಸಿದರು. ಚನ್ನಪ್ಪ ಚಿಕ್ಕೊಪ್ಪ ವಂದಿಸಿದರು.