ಲತೇಹರ್ / ಲೋಹರ್ದಾಗ, ನ 21: 2019 ರ ವಿಧಾನಸಭಾ ಚುನಾವಣೆಯು ರಾಜ್ಯದ ಭವಿಷ್ಯ ಮತ್ತು ದಿಕ್ಕನ್ನು ಣೀನಿರ್ಧರಿಸಲಿದೆ ಎಂದು ಮುಖ್ಯಮಂತ್ರಿ ರಘುಬರ್ ದಾಸ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನೀಡಿದ 'ಸಂಪೂರ್ಣ ಅಭಿವೃದ್ಧಿ'ಯ ಭರವಸೆಯನ್ನು ತಮ್ಮ ಸಕರ್ಾರ ಈಡೇರಿಸಿದೆ ಎಂದು ಅವರು ಹೇಳಿದ್ದಾರೆ . ಬಿಜೆಪಿ ಅಭ್ಯಥರ್ಿಗಳ ಪರ ಗುರುವಾರ ಇಲ್ಲಿ ಪ್ರಚಾರ ನಡೆಸಿದ ಅವರು, ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾದ ನಂತರ 370 ಮತ್ತು 35 ನೇ ವಿಧಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ರದ್ದುಪಡಿಸಿದ್ದಾರೆ. ತ್ರಿವಳಿ ತಲಾಖ್ ನಿಂದ ಮುಸ್ಲೀಂ ಸಹೋದರಿಯರನ್ನು ರಕ್ಷಿಸುವಲ್ಲಿ ನೆವಾಗಿದ್ದಾರೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಕಂಡಿದೆ. ಜಾರ್ಖಂಡ್ನಲ್ಲಿ ಕಾನೂನು ಸುವ್ಯವಸ್ಥೆ ಪುನರ್ ಸ್ಥಾಪಿಸಲಾಗಿದೆ. ಲತೇಹರ್, ಪಲಮು ಮತ್ತು ಇತರ ಅನೇಕ ಪ್ರದೇಶಗಳು ನಕ್ಸಲರ ಸಮಸ್ಯೆಯಿಂದ ನಲುಗುತ್ತಿದ್ದವು. ಆದರೆ ಬಹುಮತದ ಸಕರ್ಾರ ಅಸ್ತಿತ್ವಕ್ಕೆ ಬಂದ ನಂತರ ಈ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. 2024 ರ ವೇಳೆಗೆ ಎಲ್ಲಾ ಮನೆಗಳಿಗೆ ನೀರು ಪೂರೈಸುವ ಗುರಿಯನ್ನು ಕೇಂದ್ರ ಸಕರ್ಾರ ಹೊಂದಿದೆ. ಜಾರ್ಖಂಡ್ ಸಕರ್ಾರ 2022 ರ ವೇಳೆಗೆ ಈ ಗುರಿಯನ್ನು ಸಾಧಿಸಲು ಬಯಸಿದೆ. ರಾಜ್ಯದಲ್ಲಿ 33 ಲಕ್ಷ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ. ಪಿಎಂಎವೈ ಯೋಜನೆಯಡಿ ಐದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿಮರ್ಿಸಲಾಗಿದೆ ಎಂದು ಅವರು ಹೇಳಿದ್ದಾರೆ.